‘ಕೆಜಿಎಫ್ 2’ ಸಿನಿಮಾ ವೀಕ್ಷಿಸಲು 145 ಕಿ.ಮೀ ನಡೆದ ಬೆಂಗಾಳಿ ಅಭಿಮಾನಿ

‘ಕೆಜಿಎಫ್ 2 :

‘ಕೆಜಿಎಫ್ 2’ ಸಿನಿಮಾವನ್ನು ನೋಡಲು ರಾಜ್ಯದಲ್ಲಿ ಅಭಿಮಾನಿಗಳು, ಮಧ್ಯ ರಾತ್ರಿ ಚಿತ್ರಮಂದಿರದ ಮುಂದೆ ಸಾಲುಗಟ್ಟಿದ್ದರು, ಕಟೌಟ್‌ಗೆ ಹಾರ ಹಾಕಿ ಹಾಲು-ಮೊಸರು ಅಭಿಷೇಕಗಳನ್ನು ಮಾಡಿಸಿ ತಮ್ಮದೇ ರೀತಿಯಲ್ಲಿ ಅಭಿಮಾನ ಮೆರೆದರು.

ಆದರೆ ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ರಾಕಿಭಾಯ್ ಅಭಿಮಾನಿಯೊಬ್ಬ ‘ಕೆಜಿಎಫ್ 2’ ಸಿನಿಮಾ ನೋಡಲೆಂದು 145 ಕಿಲೊಮೀಟರ್ ನಡೆದುಕೊಂಡು ಬಂದಿದ್ದಾನೆ!

19 ವರ್ಷದ ಯುವಕನೊಬ್ಬ ಯಶ್‌ ಅಭಿಮಾನಿಯಾಗಿದ್ದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಿಂದ ಕೊಲ್ಕತ್ತಕ್ಕೆ ನಡೆದುಕೊಂಡು ಬಂದು ನವಿಯಾ ಚಿತ್ರಮಂದಿರದ ಎದುರು ಫುಟ್‌ಪಾತ್‌ ಮೇಲೆ ಮಲಗಿಕೊಂಡು ನಂತರ ಮುಂಜಾನೆ ಸಿನಿಮಾ ಟಿಕೆಟ್ ತೆಗೆದುಕೊಂಡು ಇಂದು ಸಿನಿಮಾ ವೀಕ್ಷಿಸಿದ್ದಾನೆ.

ತಾನು ಯಶ್‌ರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಆ ಯುವಕ ‘ಕೆಜಿಎಫ್; ಚಾಪ್ಟರ್ 1’ ಅನ್ನು 20 ಕ್ಕೂ ಹೆಚ್ಚು ಬಾರಿ ನೋಡಿರುವುದಾಗಿ ಹೇಳಿದ್ದಾನೆ. ತಮ್ಮ ಜಿಲ್ಲೆಯಲ್ಲಿ ‘ಕೆಜಿಎಫ್ 2’ ಬಿಡುಗಡೆ ಆಗದೇ ಇರುವ ಕಾರಣ ತಾವು ಅಲ್ಲಿಂದ ಕೊಲ್ಕತ್ತಕ್ಕೆ ಕಾಲ್ನಡಿಗೆಯಲ್ಲಿ ಬಂದು ಸಿನಿಮಾ ನೋಡಿರುವುದಾಗಿ ಹೇಳಿದ್ದಾನೆ.

             ಪಶ್ಚಿಮ ಬಂಗಾಳದಲ್ಲಿ ದಕ್ಷಿಣ ಭಾರತ ಸಿನಿಮಾಗಳಿಗೆ ಬೇಡಿಕೆ

     ‘ಕೆಜಿಎಫ್ 2’ ಸಿನಿಮಾ ಕೊಲ್ಕತ್ತದಲ್ಲಿ ಕೆಲವು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಆಗಿದೆ. ಕೊಲ್ಕತ್ತದಲ್ಲಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಹ ದೊರೆತಿದೆ. ಮಾರ್ಚ್ 25 ರಂದು ಬಿಡುಗಡೆ ಆಗಿದ್ದ ‘RRR’ ಸಿನಿಮಾ ಸಹ ಪಶ್ಚಿಮ ಬಂಗಾಳದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಸುಮಾರು 20 ಕೋಟಿ ಹಣವನ್ನು ಅಲ್ಲಿ ‘RRR’ ಗಳಿಸಿತ್ತು. ಇದೀಗ ‘ಕೆಜಿಎಫ್ 2’ ಅನ್ನೂ ಸಹ ಬೆಂಗಾಳಿ ಜನ ಖುಷಿಯಿಂದ ಸ್ವಾಗತಿಸಿದ್ದು, ಅಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡುವ ನಿರೀಕ್ಷೆ ಇದೆ.

 

          ಮೊದಲ ದಿನ ಸುಮಾರು 140 ಕೋಟಿ ಕಲೆಕ್ಷನ್

      ‘ ಕೆಜಿಎಫ್ 2’ ಸಿನಿಮಾ ಮೊದಲ ದಿನ ಸುಮಾರು 140 ಕೋಟಿ ರುಪಾಯಿ ಹಣ ಗಳಿಸಿದೆ. ಭಾರತದಲ್ಲಿ ಗಳಿಸಿದ ಕಲೆಕ್ಷನ್ ಲೆಕ್ಕ ಮಾಡಿದರೆ ಸುಮಾರು 120 ಕೋಟಿ ರುಪಾಯಿ ಆಗುತ್ತದೆ. ಇದರಲ್ಲಿ ಅತಿ ಹೆಚ್ಚು ಹಣ ಬಂದಿರುವುದು ಹಿಂದಿ ಭಾಗದ ಮಾರುಕಟ್ಟೆಯಿಂದ ಎಂಬುದು ವಿಶೇಷ. ಹಿಂದಿ ರಾಜ್ಯಗಳಿಂದ ಸುಮಾರು 40 ರಿಂದ 45 ಕೋಟಿ ಹಣವನ್ನು ಕೆಜಿಎಫ್ 2 ಸಿನಿಮಾ ಕಲೆಕ್ಷನ್ ಮಾಡಿದೆ. ವಿದೇಶದಲ್ಲಿ 25 ಕೋಟಿ ರುಪಾಯಿ ಹಣವನ್ನು ಸಿನಿಮಾ ಗಳಿಸಿದೆ.

            ‘ಕೆಜಿಎಫ್ 2’ ಅನ್ನು ಹಿಂದಿ ಭಾಷಿಕ ಜನ ಮೆಚ್ಚಿಕೊಂಡಿದ್ದಾರೆ

         ‘ಕೆಜಿಎಫ್ 2’ ಸಿನಿಮಾವನ್ನು ಹಿಂದಿ ಭಾಷಿಕ ಜನ ಬಹಳ ಮೆಚ್ಚಿಕೊಂಡಿದ್ದಾರೆ. ಕರ್ನಾಟಕದಲ್ಲಿಇರುವಂತೆ ಮುಂಬೈನಲ್ಲಿ ಯಶ್‌ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ ಮಧ್ಯಪ್ರದೇಶಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಬಹಳ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆ ಭಾಗದಲ್ಲಿ ಆಕ್ಷನ್ ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದ್ದು, ‘ಕೆಜಿಎಫ್ 2’ ಸಿನಿಮಾ ಪಕ್ಕಾ ಆಕ್ಷನ್ ಹಾಗೂ ಸೆಂಟಿಮೆಂಟ್ ಬೆರೆತ ಸಿನಿಮಾ ಆಗಿರುವ ಕಾರಣ ಹಿಂದಿ ಭಾಷಿಕ ಜನ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ.

          ದಕ್ಷಿಣ ಭಾರತದಲ್ಲಿ ಎಷ್ಟು ಕಲೆಕ್ಷನ್

       ‘ಕೆಜಿಎಫ್ 2’ ಕರ್ನಾಟಕದಲ್ಲಿ ಫಸ್ಟ್ ಡೇ ಒಳ್ಳೆಉಯ ಪ್ರದರ್ಶನ ಕಂಡಿದೆ. ಸುಮಾರು 400ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ಗಳಲ್ಲಿ ‘ಕೆಜಿಎಫ್ 2’ ಬಿಡುಗಡೆಯಾಗಿತ್ತು. ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲೂ ರಿಲೀಸ್ ಆಗಿದ್ದು, ಕರ್ನಾಟಕದಲ್ಲಿ ಮೊದಲ ದಿನ ಬರೋಬ್ಬರಿ 38 ಕೋಟಿ ಗಳಿಸಿದೆ. ಆಂಧ್ರ ತೆಲಂಗಾಣಗಳಲ್ಲಿ ಸಹ ‘ಕೆಜಿಎಫ್‌’ ಅಭಿಮಾನಿಗಳು ಇದ್ದು ಎರಡೂ ರಾಜ್ಯಗಳಿಂದ ಸುಮಾರು 25 ಕೋಟಿ ಹಣವನ್ನು ಸಿನಿಮಾ ಗಳಿಸಿದೆ. ತಮಿಳುನಾಡಿನಲ್ಲಿ ‘ಬೀಸ್ಟ್’ ಸಿನಿಮಾ ಎದುರಾಳಿಯಾಗಿದ್ದರೂ ಸಹ 6 ರಿಂದ 7 ಕೋಟಿ ಗಳಿಸಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಕೆಲೆಕ್ಷನ್ ಹೆಚ್ಚಾಗಲಿದೆ. ಕೇರಳದಲ್ಲಿ ಮೊದಲ ದಿನ ಸುಮಾರು 5 ಕೋಟಿ ಗಳಿಸಿದೆ. ಇನ್ನು ವಿದೇಶದಲ್ಲಿ 25 ಕೋಟಿ ರುಪಾಯಿಗಳನ್ನು ಈ ಸಿನಿಮಾ ಗಳಿಸಿಕೊಂಡಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link