ತಿಪಟೂರು :
ಮಹಾಮಾನವತಾವಾದಿ, ವಿಶ್ವಜ್ಞಾನಿ, ಅಂಬೇಡ್ಕರ್ ಜನ್ಮ ದಿನದ ಅಳವಡಿಸಿದ್ದ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರಿಂದ ತಾಲೂಕಿನ ಕೆರಗೋಡಿಯಲ್ಲಿ ಸ್ಥಳಿಯರು ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.
ಅಂಬೇಡ್ಕರ್ ದಿನದಂದು ಹಾಕಿದ್ದ ಫ್ಲೆಕ್ಸ್ಅನ್ನು ಕಿಡಿಗೆಡಿಗಳು ಹರಿದು ಹಾಕಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಿಯರು ಕೆರೆಗೋಡಿ ವೃತ್ತಕ್ಕೆ ಬಂದು ರಸ್ತೆತಡೆಯನ್ನು ನಡೆಸಿ ಕಿಡೇಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆದು ಧರಣಿ ನಡೆಸಿದರು.
ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಬರೆದ ‘ಕೆಜಿಎಫ್ ಚಾಪ್ಟರ್ 2’.. ಫಸ್ಟ್ ಡೇ ಕಲೆಕ್ಷನ್ ಏಷ್ಟು ಕೋಟಿ ?
ಈ ಸಂದರ್ಭದಲ್ಲಿ ದಲಿತ ಮುಖಂಡ ರಂಗಸ್ವಾಮಿ ಮಾತನಾಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡುವುದು ಒಂದೇ ಭಾರತದ ಸಂವಿಧಾನಕ್ಕೆ ಅವಮಾನ ಮಾಡುವುದೂ ಒಂದೇ ಆದ್ದರಿಂದ ಭಾವಚಿತ್ರವನ್ನು ಹಾಳುಮಾಡಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂದಿಸಬೇಕು ಹಾಗೂ ಇಂತಹ ಪ್ರಕರಣಗಳು ಮತ್ತೆ ಜರುಗದಂತೆ ಆರಕ್ಷಕರು ಎಚ್ಚರಿಕೆ ವಹಿಸಬೇಕೆಂದ ಅವರು ತಾಲೂಕಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಘಟನೆ ಇದು 2ನೇಯದಾಗಿದೆ ಮೊದಲನೆಯದು ಕಿಬ್ಬನಹಳ್ಳಿ ಹೋಬಳಿಯ ಜಕ್ಕನಹಳ್ಳಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಕೆಸರನ್ನು ಎರಚಿದ್ದರು ಅದನ್ನು ಬಿಟ್ಟರೆ ಇಂದು ಕೆರೆಗೋಡಿಯಲ್ಲಿ ಅಂಬೇಡ್ಕರ್ ಭಾಚಿತ್ರವಿರುವ ಫ್ಲೆಕ್ಸ್ ಹರಿದುಹಾಕಿರುವುದು ಖಂಡನೀಯ.
ಕರ್ನಾಟಕದಲ್ಲಿ ಏ. 18ರವರೆಗೆ ಕರ್ನಾಟಕದಲ್ಲಿ ಮಳೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಎಲ್ಲರೂ ಸಾರಸ್ಯವಾಗಿ ಬಾಳಬೇಕಾದರೆ ಕೆಲವು ಕಿಡಿಗೇಡಿಗಳು ಇಲ್ಲ ಆಯಾರದ್ದು ಕೊಮ್ಮಕ್ಕಿನಂದ ಹೀಗೆಮಾಡಿದ್ದಾರೋ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.ಸೂಕ್ತ ಸಮಯಕ್ಕೆ ಆರಕ್ಷಕರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಸಂದರ್ಭದಲ್ಲಿ ಕೆರೆಗೋಡಿ-ರಂಗಾಪುರ ಗ್ರಾ.ಪಂ ಸದಸ್ಯ ಮಹೇಶ್, ದಲಿತ ಮುಖಂಡರುಗಳಾದ ಕೊಪ್ಪ ಶಾಂತಪ್ಪ, ಮಂಜುನಾಥ್, ಸಂತೋಷ್, ರಮೇಶ್, ರಾಜೇಶ್ ಹಾಗೂ ನೂರಾರು ಅಂಬೇಡ್ಕರ್ ಅಭಿಮಾನಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ