ನಾಲ್ಕನೇ ಅಲೆ ಆತಂಕ: ದೇಶದಲ್ಲಿ ಕರೊನಾ ಪ್ರಕರಣ ದಿಢೀರ್ ಏರಿಕೆ

ನವದೆಹಲಿ: 

ಚೀನಾ ಹಾಗೂ ಯುರೋಪ್​ನ ಹಲವು ದೇಶಗಳಲ್ಲಿ ಹೊಸ ಕರೊನಾ ಪ್ರಕರಣಗಳು ಹೆಚ್ಚಳ ಕಂಡು, ಆತಂಕ ಮೂಡಿಸಿರುವ ಬೆನ್ನಲ್ಲೇ, ಭಾರತದಲ್ಲೂ ದೈನಿಕ ಕೇಸ್​ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಸೋಮವಾರ 1,150 ಕರೊನಾ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದರೆ, ಮಂಗಳವಾರ ಇದು 2,183ಕ್ಕೆ ಏರಿಕೆ ಕಂಡಿದೆ.ಅಂದರೆ ಹೊಸ ಪ್ರಕರಣಗಳಲ್ಲಿ ಶೇಕಡ 89.8 ಏರಿಕೆಯಾಗಿದ್ದು, ನಾಲ್ಕನೇ ಅಲೆ ಏಳಬಹುದೆಂಬ ಭಯಕ್ಕೂ ಕಾರಣವಾಗಿದೆ.

ಸೋಮವಾರ ದೇಶದಲ್ಲಿ 214 ಜನರು ಮೃತಪಟ್ಟಿದ್ದು, ಆ ಪೈಕಿ ಕೇರಳದಲ್ಲೇ 212 ಮಂದಿಯ ಸಾವು ಸಂಭವಿಸಿದೆ. ಈ 212ರಲ್ಲಿ ಹಿಂದಿನ 62 ಸಾವಿನ ಪ್ರಕರಣವೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರ ನಡುವೆ ಸೋಂಕು ಹರಡುವ ಪ್ರಮಾಣದ ಸೂಚಕವಾದ ದೈನಿಕ ಪಾಸಿಟಿವಿಟಿ ದರ ಶೇಕಡ 0.83ಕ್ಕೆ ಜಿಗಿದಿದೆ. ಭಾನುವಾರ ಅದು ಶೇ. 0.31 ಆಗಿತ್ತು. ಸೋಮವಾರ 11,558 ಇದ್ದ ಸಕ್ರಿಯ ಕೇಸ್ ಮಂಗಳವಾರ 11,542ಕ್ಕೆ ಇಳಿದಿದೆ.

ಐಪಿಎಲ್‌ಗೆ 15 ವರ್ಷಗಳ ಸಂಭ್ರಮ; ವಿಶೇಷ ವಿಡಿಯೊ ನೋಡಿ

ದೆಹಲಿ ಸಹಿತ ಕೆಲವು ನಗರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ದೆಹಲಿ ಮತ್ತು ಆಸುಪಾಸಿನ ಗಾಜಿಯಾಬಾದ್ ಹಾಗೂ ನೋಯ್ಡಾದಲ್ಲಿ ಕೆಲ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಕರೊನಾಗೆ ತುತ್ತಾದ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಚೀನಾದಲ್ಲಿ ಹೆಚ್ಚುತ್ತಿದೆ ಸಾವು: ಚೀನಾದ ಶಾಂಘೈಯಲ್ಲಿ ಸೋಮವಾರ ಸೋಂಕಿಗೆ ಇನ್ನೊಬ್ಬರು ಬಲಿಯಾಗಿದ್ದಾರೆ. ಲಸಿಕೆ ಪಡೆಯದ ಹಾಗೂ ಅನ್ಯವ್ಯಾಧಿಗಳಿದ್ದ ಮೂವರು ವೃದ್ಧರು ಭಾನುವಾರ ಮೃತಪಟ್ಟಿದ್ದರು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಮಾರ್ಚ್ 1ರ ನಂತರ ಸೋಂಕಿತರಾದ 3,72,000 ಜನರ ಪೈಕಿ ಇದು ಮೊದಲ ಸಾವು ಎಂದು ಚೀನಾ ಮಾಧ್ಯಮ ವರದಿ ಮಾಡಿದೆ. ಶಾಂಘೈ ಜತೆಗೆ ಇತರ 15 ವಲಯಗಳಲ್ಲಿಯೂ ಕರೊನಾ ಸೋಂಕು ಅಬ್ಬರಿಸುತ್ತಿದೆ.

ರೆಕಾರ್ಡ್​; ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ‘ಕೆಜಿಎಫ್ ಚಾಪ್ಟರ್​ 2’

ಮಾಸ್ಕ್ ಕಡ್ಡಾಯ ನಿಯಮ ಮರುಜಾರಿ: ದೇಶದಲ್ಲಿ ಕರೊನಾ ಹೆಚ್ಚುತ್ತಿರುವುದರಿಂದ ಲಖನೌ ಹಾಗೂ ರಾಷ್ಟ್ರ ರಾಜಧಾನಿ ವಲಯದ (ಎನ್​ಸಿಆರ್) ಜಿಲ್ಲೆಗಳ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಗೌತಮ ಬುದ್ಧ ನಗರ, ಗಾಜಿಯಾಬಾದ್, ಹಾಪುರ್, ಮೀರತ್, ಬುಲಂದ್​ಶಹರ್ ಮತ್ತು ಬಾಘಪತ್ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ತರಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳು ‘ಆನ್ ಲೈನ್’ನಲ್ಲೇ ಲಭ್ಯ

ರಾಜ್ಯದಲ್ಲಿ 53 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 5,301 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 53 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ 51 ಮಂದಿ ಹಾಗೂ ದಕ್ಷಿಣ ಕನ್ನಡದಲ್ಲಿ ಇಬ್ಬರು ಸೇರಿ 53 ಮಂದಿಗೆ ಸೋಂಕು ದೃಢಪಟ್ಟಿದೆ. ದಿನದ ಸೋಂಕು ಪ್ರಮಾಣ ದರ ಶೇ. 0.99 ತಲುಪಿದೆ.

ನಾಯಿಮರಿ ಹೊತ್ತೊಯ್ದ ಚಿರತೆ ಸಿಸಿಟಿವಿ ಯಲ್ಲಿ ಸೆರೆಯಾದ ದೃಶ್ಯ

ಇದರೊಂದಿಗೆ ರಾಜ್ಯದಲ್ಲಿ ಸೋಂಕು ಕೊಂಚ ಮಟ್ಟಿಗೆ ಏರಿಕೆ ಕಂಡಂತಾಗಿದ್ದು, ಮರಣ ಪ್ರಮಾಣ ದರ ಶೂನ್ಯವಾಗಿದೆ. ಕಳೆದ 24 ಗಂಟೆಗಳಲ್ಲಿ 44 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.04 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,473 ತಲುಪಿದೆ. ರಾಜ್ಯದಲ್ಲಿ ಈವರೆಗೆ 40,057 ಮಂದಿ ಸೋಂಕಿಗೆ ಬಲಿಯಾಗಿದ್ದು, 39.46 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap