ಬೆಂಗಳೂರು:
ಇಂತಹ ಪ್ರಶ್ನೆ ರಾಜ್ಯ ಹೈಕೋರ್ಟ್‍ನಲ್ಲೂ ಎದುರಾಗಿದೆ. ಸರ್ಕಾರದ ಕಾಮಗಾರಿಗಳನ್ನು ಕೈಗೊಳ್ಳಲು ಶೇ.40 ಕಮೀಷನ್ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಹೆಚ್ಚು ಚರ್ಚೆಗೆ ಬಂದಿರುವ ಈ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದ ದೂರೊಂದು ರಾಜ್ಯ ಹೈಕೋರ್ಟ್‍ನಲ್ಲಿ ದಾಖಲಾಗಿದೆ.
ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಪಾವತಿ ವಿಳಂಬವಾಗುತ್ತಿರುವುದಕ್ಕೆ ಕಿಡಿಕಾರಿದೆ.ಕೆಲಸ ಮಾಡಿದರೂ ಹಣ ಪಾವತಿಗೆ ಏಕೆ ಮೀನಾ ಮೇಷ ಎಣಿಸುತ್ತಿದ್ದೀರಿ. ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರ ಸಲ್ಲಿಸಿದರೂ ಹಣ ಪಾವತಿಸದೆ ಇರುವುದು ಏಕೆ ಎಂದು ಸರ್ಕಾರವನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದ ಜತೆಗೆ ಬಿಗ್ ಶಾಕ್ : ಬೆಂಗಳೂರಲ್ಲಿ BA.10, BA.2,12 ಕೊರೊನಾ ಹೊಸ ರೂಪಾಂತರಿ ವೈರಸ್ ಪತ್ತೆ
ಒಂದು ಕಡೆ ವಿರೋಧ ಪಕ್ಷಗಳ ವಾಗ್ದಾಳಿ, ಮತ್ತೊಂದು ಕಡೆ ಹೈಕೋರ್ಟ್ ಚಾಟಿ, ಈ ನಡುವೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಶರಣಾಗಿರುವ ಪ್ರಸಂಗ ಇವೆಲ್ಲವೂ ಸರ್ಕಾರದ ಕಾಮಗಾರಿ ಕೈಗೊಳ್ಳಲು ಮತ್ತು ಅದರ ಅನುಷ್ಠಾನದಲ್ಲಿ ಎದುರಾಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಬಯಲು ಮಾಡತೊಡಗಿವೆ.
ಕಾಮಗಾರಿಗಳನ್ನು ನಡೆಸಲು ಶೇ.40 ಕಮೀಷನ್ ನೀಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘ ಈ ಹಿಂದೆಯೇ ಆರೋಪಿಸಿತ್ತು. ಇದು ಬಹುದೊಡ್ಡ ಸುದ್ದಿಯಾಗಿ ಚರ್ಚೆಗೂ ಗ್ರಾಸವಾಗಿತ್ತು. ಹೀಗಾದರೂ ಇದು ನಿಯಂತ್ರಣಕ್ಕೆ ಬರಲೇ ಇಲ್ಲ. ಬದಲಾಗಿ ಕಾಮಗಾರಿಗಳ ಅನುಷ್ಠಾನದಲ್ಲಿ ಪರ್ಸಂಟೇಜ್ ವ್ಯವಹಾರಗಳು ಮತ್ತಷ್ಟು ಹೆಚ್ಚಳವಾಗುತ್ತಲೇ ಹೋದ ಆರೋಪಗಳು ಕೇಳಿಬರುತ್ತಿವೆ. ಹೀಗೆ ಕಮೀಷನ್ ವ್ಯವಹಾರದಲ್ಲಿ ಇಲಾಖೆಗಳು ಮುಳುಗಿದರೆ, ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಪರ್ಸಂಟೇಜ್ ವ್ಯವಹಾರದಲ್ಲಿ ನಿರತರಾದರೆ ಕಾಮಗಾರಿಗಳ ಗುಣಮಟ್ಟ ಕಾಪಾಡುವುದಾದರೂ ಹೇಗೆ?
ನನ್ನ ತೋಳಿಗೆ ಭಾರತದ ಕೋವಿಡ್ ಲಸಿಕೆ ಹಾಕಲಾಗಿದೆ, ಭಾರತಕ್ಕೆ ಧನ್ಯವಾದ: ಬ್ರಿಟನ್ ಪ್ರಧಾನಿ
ಗುತ್ತಿಗೆದಾರರನ್ನಂತೂ ಗೋಳು ಹೋಯ್ದುಕೊಳ್ಳಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಿಂದ ಆರಂಭವಾಗುವ ಭ್ರಷ್ಟಾಚಾರ ಕಾಮಗಾರಿ ಮುಗಿಯುವ ತನಕವೂ ಮುಂದುವರೆಯುತ್ತದೆ. ಸರ್ಕಾರದಿಂದ ಬರುವ ಬಿಲ್‍ಗೆ ಆಸೆ ಪಟ್ಟು ಸಾಲ ಮಾಡಿ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಿರುತ್ತಾರೆ. ಸಂಬಂಧಪಟ್ಟವರನ್ನೆಲ್ಲಾ ಕಂಡಿರುತ್ತಾರೆ. ಏನೆಲ್ಲಾ ಬೇಕೋ ಅದನ್ನೆಲ್ಲಾ ಒದಗಿಸಿರುತ್ತಾರೆ. ಇಷ್ಟಾದರೂ ಕೊನೆಯ ಹಂತದಲ್ಲಿ ಬಿಲ್‍ಗಳನ್ನು ಪೆಂಡಿಂಗ್ ಇಟ್ಟುಕೊಳ್ಳುವ, ಸತಾಯಿಸುವ ಪ್ರಕರಣಗಳು ಅತ್ಯಂತ ನಾಚಿಕೆಗೇಡಿನ ಸಂಗತಿಗಳು.
ಶೇ.40 ರಷ್ಟು ಕಮೀಷನ್ ಹೋದರೆ ಉಳಿದ 60 ಭಾಗದಲ್ಲಿ ಗುತ್ತಿಗೆದಾರರು ಇನ್ಯಾವ ಘನಂದಾರಿ ಕಾಮಗಾರಿ ನಿರ್ವಹಿಸಿಯಾರು? ಆ ಕಾಮಗಾರಿಗಳ ಗುಣಮಟ್ಟ ಹೇಗಿರಬಹುದು? ಇವೆಲ್ಲವೂ ಪ್ರಶ್ನಾರ್ಥಕ ಅಂಶಗಳು. ಈ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ 50 ಕೋಟಿ ರೂ.ಗಳ ಮೇಲ್ಪಟ್ಟ ಕಾಮಗಾರಿಗಳಿಗೆ ಸಮಿತಿಯೊಂದನ್ನು ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕೆಜಿಎಫ್ ಚಾಪ್ಟರ್ 2 ವಿಶೇಷ ದಾಖಲೆ: ಒಂದೇ ವಾರದಲ್ಲಿ 800 ಕೋಟಿ ರೂಪಾಯಿ ಕಲೆಕ್ಷನ್
ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಕಮೀಷನ್ ವ್ಯವಹಾರವನ್ನು ತಡೆಗಟ್ಟದೆ ಹೋದರೆ ಮುಂದಿನ ದಿನಗಳು ಮತ್ತಷ್ಟು ಕರಾಳವಾಗಲಿವೆ. ನಾನು ಇಷ್ಟು ಕೊಟ್ಟಿದ್ದೇನೆ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುವ ದಿನಗಳು ದೂರವಿಲ್ಲ. ದೊಡ್ಡಮಟ್ಟದಲ್ಲಿ, ದೊಡ್ಡ ದೊಡ್ಡ ಕಾಮಗಾರಿಗಳ ನಿರ್ವಹಣೆಯಲ್ಲಿ ಇಷ್ಟೊಂದು ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವಾಗ ಇನ್ನು ಸಣ್ಣಪುಟ್ಟ ಕಾಮಗಾರಿಗಳನ್ನು ನಿರ್ವಹಿಸುವಾಗ ಅವುಗಳೂ ಸಹ ಇದರಿಂದ ಹೊರತಾಗಿಲ್ಲ.
ರಾಜ್ಯದ ಎಲ್ಲಾ ಇಲಾಖೆಯಲ್ಲೂ ಅಕ್ರಮ ನಡೆಯುತ್ತಿರುವುದು ಸರ್ಕಾರಕ್ಕೂ ಗೊತ್ತಿದೆ: ಎಚ್.ಡಿ ಕುಮಾರಸ್ವಾಮಿ
ಇದು ಹೀಗೆಯೇ ಮುಂದುವರೆದರೆ ಲಂಚ, ಭ್ರಷ್ಟಾಚಾರದ ಮಜಲುಗಳು ಬಹಿರಂಗವಾಗಿಯೇ ಇಲಾಖೆಗಳನ್ನು ವ್ಯಾಪಿಸಿ ಸಾರ್ವಜನಿಕರು ಹೈರಾಣಾಗುವ ವ್ಯವಸ್ಥೆ ನಿರ್ಮಾಣವಾದರೆ ಆಶ್ಚರ್ಯವೇನಿಲ್ಲ.ಹಿಂದೆಲ್ಲ ಲೋಕಾಯುಕ್ತ ಎಂಬ ಪದದಿಂದಲೇ ಸರ್ಕಾರಿ ವಲಯ ಬೆಚ್ಚಿಬೀಳುತ್ತಿತ್ತು. ಈಗ ಅದೂ ಸಹ ಹಲ್ಲಿಲ್ಲದ ಹಾವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ