ಗಲಭೆಕೋರರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ನಿಲುವು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನವದೆಹಲಿ:

ನವದೆಹಲಿ, ಏಪ್ರಿಲ್ 29 ಹುಬ್ಬಳ್ಳಿ ಗಲಭೆ ಪ್ರಕಾರದಲ್ಲಿ ಬಂಧಿತರ ನೆರವಿಗೆ ಧಾವಿಸಿರುವುದು ಶಾಸಕಾಂಜಮೀರ್ ಅಹಮದ್ ಹಾಗೂ ಅವರ ಪಕ್ಷದ ನಿಲುವು. ಗಲಭೆ ಮಾಡಿದವ ಜೊತೆ ನಿಲ್ಲುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡೇ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ನವದೆಹಲಿಗೆ ಆಗಮಿಸಿ ಕರ್ನಾಟಕ ಭವನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಟಾರ್ಗೆಟ್ ಮಾಡದೇ… ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಯಾರೆ ತಪ್ಪು ಮಾಡಿದ್ರು ಕ್ರಮ ತೆಗೆದುಕೊಳ್ಳಲಿ : ಸಿದ್ದರಾಮಯ್ಯ

ಹುಬ್ಬಳ್ಳಿ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರು ಬಂಧಿತರ ನೆರವಿಗೆ ಧಾವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ಮೊದಲ ಬಾರಿ ಏನಲ್ಲ.ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದಲ್ಲಿಯೂ ಅದನ್ನೇ ಮಾಡಿದ್ದರು. ಅದು ಅವರ ಮತ್ತು ಅವರ ಪಕ್ಷದ ನಿಲುವು. ಅವರು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಅವರ ನಾಯಕರು ಅದರ ಬಗ್ಗೆ ಯಾವುದೇ ಸ್ಪಷ್ಟೀಕರಣ ಕೂಡ ನೀಡದೇ ಇರುವುದರಿಂದ ಅವರ ನಿಲುವು ತಿಳಿಯುತ್ತದೆ ಎಂದರು.

ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ: ಪ್ರಕರಣದ ಕಿಂಗ್‌ಪಿನ್ 18 ದಿನಗಳ ಪಯಣ ಹೇಗಿತ್ತು ಗೊತ್ತಾ?

ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪಿ.ಎಫ್ .ಐ, ಎಸ್.ಡಿ.ಪಿ.ಐ ಸಂಘಟನೆಗಳನ್ನು ಬ್ಯಾನ್ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಅಲ್ಲಿ ಚರ್ಚೆಯಾಗುವುದಿಲ್ಲ. ಪಿ.ಎಫ್.ಐ ಕರ್ನಾಟಕದಲ್ಲಿ ಮಾತ್ರವಲ್ಲ ಅವರ ಚಟುವಟಿಕೆಗಳು ಸೀಮಿತವಾಗಿಲ್ಲ.ಉತ್ತರಪ್ರದೇಶ, ಕೇರಳ ಮಹಾರಾಷ್ಟ್ರದಲ್ಲಿಯೂ ಇದೆ. ಅದರ ಸಮಗ್ರ ಚಟುವಟಿಕೆಗಳ ಗೃಹ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link