ಬ್ರೌನ್ ರೈಸ್‌ ಸೇವನೆ ʼಯಿಂದ ಈ ʻ ಅಘಾತಕಾರಿ ಆರೋಗ್ಯ ಸಮಸ್ಯೆʼಗಳಿಗೆ ಬ್ರೇಕ್‌ ಹಾಕಿ

ಬ್ರೌನ್ ರೈಸ್‌ :

ದೈನಂದಿನ ಆಹಾರದಲ್ಲಿ ಅನ್ನ ಊಟ ಮಾಡದವರು ಯಾರಿದ್ದಾರೆ ಹೇಳಿ? ಅದರಲ್ಲೂ ದಕ್ಷಿಣ ಭಾರತದವರಿಗೆ ಅನ್ನ ಹಾಗೂ ಅನ್ನದಿಂದ ಮಾಡಿದ ತಿಂಡಿ ಎಂದರೆ ಬಲು ಪ್ರೀತಿ. ಆದರೆ ಹೆಚ್ಚು ಅನ್ನ ಊಟ ಮಾಡಿದರೆ ದೇಹದಲ್ಲಿ ಕೊಬ್ಬು ಉಂಟಾಗಿ ತೂಕ ಹೆಚ್ಚಾಗುತ್ತದೆ ಎಂಬುದು ಅನ್ನ ಸೇವಿಸುವವರಲ್ಲಿ ಉಂಟಾಗಿರುವ ಸಮಸ್ಯೆಯಾಗಿದೆ.

ಅನ್ನದ ಬದಲಿಗೆ ಯಾವುದೇ ಇತರ ಆಹಾರವನ್ನು ಸೇವಿಸಿದರೂ ಅನ್ನ ನೀಡುವ ತೃಪ್ತಿ ಹಾಗೂ ರುಚಿಯನ್ನು ಇನ್ನಾವುದೇ ಆಹಾರ ನೀಡಲು ಸಾಧ್ಯವಿಲ್ಲ. ಅನ್ನಕ್ಕೆ ಅನ್ನವೇ ಸಾಟಿ.ನಿಮಗೆ ಅನ್ನ ಊಟ ಮಾಡಲೇಬೇಕು ಎಂದಾದಲ್ಲಿ ಬಿಳಿ ಅನ್ನದ ಬದಲಿಗೆ ಬ್ರೌನ್ ರೈಸ್ ಅನ್ನು ನೀವು ಆಯ್ಕೆಮಾಡಬಹುದು. ಬ್ರೌನ್ ರೈಸ್‌ಗೆ ಕೆಂಪಕ್ಕಿ ಅನ್ನು ಕುಚ್ಚಲಕ್ಕಿ ಎಂಬ ಹೆಸರೂ ಇದೆ.

SSLC ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮುಖ್ಯ ಮಾಹಿತಿ

ಬೇರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಹೆಚ್ಚು ಸಮಯ ತಗಲುತ್ತದೆ ಮತ್ತು ಚೆನ್ನಾಗಿ ಅಗೆದು ಸೇವಿಸಬೇಕಾಗುತ್ತದೆ. ಕುಚ್ಚಲಕ್ಕಿಯನ್ನೇ ಹೋಲುವ ಬ್ರೌನ್ ರೈಸ್‌ನಲ್ಲಿ ಜೀವಾಂಕುರ ಪದರ, ಹೊಟ್ಟು ಪಾರ್ಶ್ವ ಸಿಪ್ಪೆ ಹಾಗೆಯೇ ಇರುತ್ತದೆ. ಬ್ರೌನ್ ರೈಸ್ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜಗಳಿದ್ದು ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಮಧುಮೇಹದ ಅಪಾಯ ಕಡಿಮೆ:

ಬ್ರೌನ್ ರೈಸ್ ಗೈಸಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದಿಲ್ಲ. ಮೂರು ಬಾರಿ ಈ ಅಕ್ಕಿಯಿಂದ ಮಾಡಿದ ಅನ್ನ ಸೇವನೆ ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು 32% ನಷ್ಟು ಕಡಿಮೆ ಮಾಡಬಹುದಾಗಿದೆ. ಬಿಳಿ ಅನ್ನದಿಂದ ಮಧುಮೇಹದ ಅಪಾಯ ಹೆಚ್ಚು. ಬಿಳಿ ಅನ್ನದಿಂದ ಮಧುಮೇಹದ ಅಪಾಯವು 17% ವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಬಯಲಿಗೆ ತಂದಿದ್ದಾರೆ: ಹೊಸಬಾಂಬ್ ಸಿಡಿಸಿದ ಹೆಚ್ ಡಿ ಕುಮಾರಸ್ವಾಮಿ!

ಹೃದಯದ ಆರೋಗ್ಯ ಕಾಪಾಡಲು:

ಬ್ರೌನ್ ರೈಸ್ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ಡಯೆಟರಿ ಫೈಬರ್ ಅಂಶ ಅಧಿಕವಾಗಿರು ವುದರಿಂದ ಹೃದಯ ಕಾಯಿಲೆಯಿಂದ ಮರಣ ಹೊಂದುವ ಅಪಾಯ ಕೂಡ ಕಡಿಮೆ. ಬ್ರೌನ್ ರೈಸ್‌ನಲ್ಲಿ ಹೆಚ್ಚು ಪ್ರಮಾಣದ ಮೆಗ್ನೇಶಿಯಂ ಇದ್ದು ಇದರಿಂದ ಪಾರ್ಶ್ವವಾಯು ಹಾಗೂ ಹೃದಯ ಕಾಯಿಲೆಗೆ ಒಳಗಾಗುವ ಅಪಾಯ ತುಂಬಾ ಕಡಿಮೆ.

ಬೊಜ್ಜು ನಿವಾರಣೆಗೆ:

ತೂಕ ಇಳಿಸುವ ಇಚ್ಛೆ ನಿಮ್ಮಲ್ಲಿ ಬಲವಾಗಿದ್ದು ಹಲವಾರು ಪ್ರಯತ್ನಗಳನ್ನು ಮಾಡಿಯೂ ವಿಫಲರಾಗಿದ್ದೀರಿ ಎಂದಾದಲ್ಲಿ ಒಮ್ಮೆ ಬ್ರೌನ್ ರೈಸ್ ಸೇವಿಸಿ ನೋಡಿ. ದೇಹದ ಬೊಜ್ಜನ್ನು ಕಡಿಮೆ ಮಾಡಲು ಬ್ರೌನ್ ರೈಸ್ ಸಹಕಾರಿಯಾಗಿದೆ.

ಸಂತಾನೋತ್ಪತ್ತಿಗೆ ಸಹಕಾರಿ:

ಬ್ರೌನ್ ರೈಸ್‌ನಲ್ಲಿರುವ ಮ್ಯಾಂಗನೀಸ್ ಅಂಶವು ದೇಹದಲ್ಲಿ ಕೊಬ್ಬು ಸಂಗ್ರಹಣೆಯಾಗದಂತೆ ಮಾಡುತ್ತದೆ. ಈ ಮ್ಯಾಂಗನೀಸ್ ಸಂತಾನೋತ್ಪತ್ತಿ ವ್ಯವಸ್ಥೆಗೂ ಪೂರಕವಾಗಿದೆ.

ರಜೆ ಮಜೆಯಲ್ಲಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶಾಲೆಗಳಿಗೆ ಬೇಸಿಗೆ ರಜೆ ವಿಸ್ತರಣೆ ಸಾಧ್ಯತೆ

ಸುಲಭ ಜೀರ್ಣಕ್ರಿಯೆ:

ಬ್ರೌನ್‌ರೈಸ್‌ನಲ್ಲಿ ನಾರಿನಂಶವಿದ್ದು ಇದು ನಿಮ್ಮ ಜೀರ್ಣವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಜೀರ್ಣ ಉಂಟಾಗದಂತೆ ತಡೆಯುತ್ತದೆ.

ಕ್ಯಾನ್ಸರ್‌ಗೆ ಔಷಧ:

ಬ್ರೌನ್‌ ರೈಸ್‌ನಲ್ಲಿ ಹೇರಳವಾಗಿರುವ ನಾರಿನಂಶ ಹಾಗೂ ಆಯಂಟಿ ಆಕ್ಸಿಡೆಂಟ್‌ಗಳು ಸ್ತನ ಕ್ಯಾನ್ಸರ್‌ ನಂತಹ ಅಪಾಯಕಾರಿ ಕಾಯಿಲೆಗಳನ್ನು ಬುಡದಲ್ಲೇ ಚಿವುಟಿ ಹಾಕುತ್ತದೆ.

ಚಿಕನ್​ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link