ಬೆಂಗಳೂರು:

ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು, ಸಚಿವ ಡಾ. ಅಶ್ವಥ್ ನಾರಾಯಣ ಮೇಲೆ ಆರೋಪ ಮಾಡಿದ್ದರು. ಇದೀಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಅದಕ್ಕ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕಾತಿ ಅಕ್ರಮದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರಿಗೆ ತುಂಬಾ ಅನುಭವವಿದೆ. ಪರೀಕ್ಷೆ ಬರೆಯದ ನರ್ಸ್ ಗಳಿಗೂ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈ ಕೆಲಸಗಳಿಗೆ ಅವರಿಗೆ ಪ್ರತ್ಯೇಕ ಹೆಸರಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
‘ದಂಗಲ್’ ದಾಖಲೆಮಾಡಿದ ಯಶ್; ಅತಿ ಹೆಚ್ಚು ಹಣ ಗಳಿಸಿದ 2ನೇ ಸಿನಿಮಾ ‘ಕೆಜಿಎಫ್ 2’
ಅಶ್ವತ್ ನಾರಾಯಣ ಅವರು ಈಗ ನಾನು ವಿಶ್ವ ಒಕ್ಕಲಿಗೆ ಅಂತಾರೆ, ಅವರು ರಾಜಕೀಯಕ್ಕೆ ಬರುವ ಮೊದಲು ಏನೇನು ಮಾಡಿದ್ದಾರೆ. ಯಾರಿಗೆಲ್ಲಾ ಸರ್ಟಿಫಿಕೇಟ್ ಕೊಡಿಸಿದ್ದಾರೆ ಎಂಬುದು ನನಗೆ ಗೊತ್ತು. ಅವರಿಗೆ ನೇಮಕಾತಿ ಅಕ್ರಮದಲ್ಲಿ ದೊಡ್ಡ ಇತಿಹಾಸವೇ ಇದೆ ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








