ಬೆಂಗಳೂರು:

ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಉತ್ತೀರ್ಣರಾಗುವುದು ಕಡ್ಡಾಯಗೊಳಿಸಲಾಗಿದೆ. ಈ ಪರೀಕ್ಷೆ ಉತ್ತೀರ್ಣಕ್ಕೆ ಹತ್ತು ವರ್ಷಗಳ ಅವಧಿಯೊಳಗೆ ಪಾಸ್ ಆಗುವುದು ಕಡ್ಡಾಯಗೊಳಿಸಲಾಗಿತ್ತು.
ರಾಜ್ಯಕ್ಕೆ ಮತ್ತೊಂದು ಬಿಗ್ ಶಾಕ್ : ಒಮಿಕ್ರಾನ್‌ನ BA.4, BA.5 ಉಪತಳಿ ಪತ್ತೆ
ಆದ್ರೇ.. ಇದೀಗ ದಿನಾಂಕ 31-12-2022ರೊಳಗೆ ಉತ್ತೀರ್ಣಗೊಳಿಸೋದನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ.ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಯಾವುದೇ ಸರ್ಕಾರಿ ನೌಕರನು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.
ಅನಧಿಕೃತವಾಗಿ ಮನೆ ನಿರ್ಮಿಸಿದವರಿಗೆ ಸಿಹಿ ಸುದ್ದಿ: ಅಕ್ರಮ-ಸಕ್ರಮ ಯೋಜನೆ ಜಾರಿಗೆ ಸರ್ಕಾರ ಚಿಂತನೆ
ಈ ನಿಯಮ ಪ್ರಾರಂಭವಾದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ, ಮುಂಬಡ್ತಿಗೆ ಅರ್ಹನಾಗತಕ್ಕದ್ದಲ್ಲ ಎಂಬುದಾಗಿ ತಿಳಿಸಿತ್ತು. ಜೊತೆಗೆ ಯಾವುದೇ ಸರ್ಕಾರಿ ನೌಕರನು, ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ಹನ್ನೊಂದು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ, ವಾರ್ಷಿಕ ವೇತನ ಬಡ್ತಿ ಗಳಿಸಲು ಅರ್ಹನಾಗತಕ್ಕದ್ದಲ್ಲ ಎಂದಿತ್ತು.
ಆದ್ರೇ.. ಇದೀಗ ಇದರ ಬದಲಾಗಿ ಯಾವುದೇ ಸರ್ಕಾರಿ ನೌಕರನು ವಾರ್ಷಿಕ ವೇತನ ಬಡ್ತಿಯನ್ನು ಪಡೆಯಲು, ದಿನಾಂಕ 31-12-2022ರೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ, ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿ ಗಳಿಸಲು ಅರ್ಹನಾಗತಕ್ಕದ್ದಲ್ಲ ಎಂಬುದಾಗಿ ತಿಳಿಸಿದೆ. ಈ ನಿಯಮ ಪ್ರಾರಂಭದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗೆ ಎಂಬ ಪದಗಳ ಬದಲಿಗೆ ದಿನಾಂಕ 31-12-2022ರೊಳಗೆ ಎಂಬ ಪದ ಮತ್ತು ಅಂಕಿಗಳನ್ನು ಪ್ರತಿಷ್ಠಾಪಿಸತಕ್ಕದ್ದು ಎಂದು ತಿಳಿಸಿದೆ.


ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








