ತುಮಕೂರು : ಪಂಚದೊಣೆಗಳ ದಶರಥೇಶ್ವರ ಕ್ಷೇತ್ರದಲ್ಲಿ ಮೇ12-13 ಧಾರ್ಮಿಕ ಮಹೋತ್ಸವ

ತುಮಕೂರು :

 

ನಿಧಿಗಳ್ಳರಿಂದ ಕನ್ನಕ್ಕೊಳಗಾಗಿದ್ದ ಐತಿಹಾಸಿಕ ತುಮಕೂರು ತಾಲೂಕು ಕೊಂತಿಹಳ್ಳಿಯ ದಶರಥೇಶ್ವರ ಸ್ವಾಮಿ ಕ್ಷೇತ್ರದ ರಕ್ಷಣೆಗೆ ಗ್ರಾಮಸ್ಥರು ಟೊಂಕಕಟ್ಟಿ ನಿಂತಿದ್ದು, ದಶರಥೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಮಾಡಿಕೊಂಡು ದ್ವಾಪರಯುಗದ ಕಾಲದ ದೇವಾಲಯದ ಗತವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಲು ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಿ ಭಕ್ತಾಧಿಗಳ ನೆರವಿನೊಂದಿಗೆ ಕಾರ್ಯತತ್ಪರರಾಗಿದ್ದಾರೆ.

ಉದ್ಘಾಟನೆಯಾದ 48 ಗಂಟೆಗಳಲ್ಲೇ ಕಿತ್ತು ಬಂದ ರಾಜ್ಯದ ಮೊಟ್ಟದ ಮೊದಲ ತೇಲುವ ಸೇತುವೆ: ಪ್ರವೇಶ ಬಂದ್!!

ವನವಾಸಕ್ಕೆ ಬಂದಿದ್ದ ಪಾಂಡವರು ಕೊಂತಿಹಳ್ಳಿಯ ಪರ್ವತೇಶ್ವರ ಸ್ವಾಮಿ ಬೆಟ್ಟದಲ್ಲಿ ತಂಗಿ, ಇಲ್ಲಿ ದಶರಥ ರಾಮನನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಿದ್ದಾರೆಂಬ ಐತಿಹಾಸಿಕ ಹಿನ್ನೆಲೆ ಕ್ಷೇತ್ರಕ್ಕಿದ್ದು, ಪಂಚ ಪಾಂಡವರು ನೆಲೆಯಾಗಿದ್ದಾರೆಂಬ ಕುರುಹಾಗಿ ಬೆಟ್ಟದಲ್ಲಿ ಪಂಚದೊಣೆಗಳಿದ್ದು ಜರಿಯಾಗಿ ನೀರು ಈ ದೊಣೆಗಳ ಮೂಲಕ ಸದಾಕಾಲ ಹರಿಯುತ್ತದೆ.

ದೇವಕನ್ನಿಕೆಯರ ಸಂಚಾರವಿದೆಯೆಂಬ ಕಾರಣಕ್ಕೆ ದೇವಕನ್ನಿಕೆಯರ ಬೆಟ್ಟ ಎಂಬ ಹೆಸರನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಪ್ರತೀ ಸೋಮವಾರ ಅಮಾವ್ಯಾಸೆಗಳಂದು ವಿಶೇಷಪೂಜೆ ನಡೆಯಲಿದ್ದು, ತುಮಕೂರು ಮಾತ್ರವಲ್ಲದೆ ರಾಜಧಾನಿ ಸುತ್ತಮುತ್ತಲ ನೆರೆಯ ಜಿಲ್ಲೆಗಳಿಂದಲೂ ಭಕ್ತರು ಬಂದು ತಮ್ಮ ಇಷ್ಟಾರ್ಥ ಈಡೇರಿಕೆಗೆ ಹರಿಕೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದಿದೆ.

ಅನೇಕ ಭಕ್ತರು ಅಮಾವ್ಯಾಸೆಯಂದು ದೊಣೆಯಲ್ಲಿ ಸ್ನಾನ ಮಾಡಿ ಬಂದು ದೇವಾಲಯದ ಅಂಗಳದಲ್ಲಿ ರಾತ್ರಿ ಮಲಗಿ, ಪ್ರಸಾದ ಸೇವಿಸುವ ಪದ್ದತಿಯನ್ನು ರೂಢಿಸಿಕೊಂಡಿದ್ದಾರೆಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಪಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ಕೊಂತಿಹಳ್ಳಿ ರಂಗನಾಥ್, ಟ್ರಸ್ಟಿಗಳಾದ ನಾಗರಾಜು, ಶಿವಣ್ಣ ವಿವರಿಸುತ್ತಾರೆ.

ಕೋರಾ ಹೋಬಳಿ ಸುತ್ತಮುತ್ತಲ ರಕ್ಷದ ದೈವವೆನಿಸಿರುವ ದಶರಥರಾಮೇಶ್ವರನನ್ನು ಬಿಡದ ದುಷ್ಕರ್ಮಿಗಳು ನಿಧಿ ಆಸೆಗೋಸ್ಕರ ದೇವಾಲಯದ ಆವರಣದಲ್ಲಿದ್ದ ಸುಂದರ ನಂದಿ, ವಿಷ್ಣು ಪ್ರತಿಮೆ, ಧ್ವಜಸ್ತಂಬವನ್ನು ಭಗ್ನಗೊಳಿಸಿದ್ದಾರೆ. ಈ ರೀತಿ ಭಗ್ನಗೊಂಡ ನಂದಿ, ಧ್ವಜಸ್ತಂಬವನ್ನು ಹೊಸದಾಗಿ ನಿರ್ಮಿಸುವ ಕಾರ್ಯಕ್ಕೆ ಮುಂದಾದ ಗ್ರಾಮಸ್ಥರು, ಹಿರಿಯರು ದಾನಿಗಳ ನೆರವಿನೊಂದಿಗೆ ಸುಮಾರು 4 ಲಕ್ಷ ವೆಚ್ಚದಲ್ಲಿ ಶಿಲಾನಂದಿ, ಧ್ವಜಸ್ತಂಬ ಮಾಡಿಸಿ ಮೇ12,13ರಂದು ಪ್ರತಿಷ್ಠಾಪನೆ ಹಮ್ಮಿಕೊಂಡಿದ್ದಾರೆ.

ಈಗಾಗಲೇ ಭಕ್ತಾಧಿಗಳಿಗಾಗಿ ವಸತಿಗೃಹ, ಸಣ್ಣ ದಾಸೋಹ ಕಟ್ಟಡ ನಿರ್ಮಿಸಿರುವ ದೇವಾಲಯ ಟ್ರಸ್ಟ್‍ನವರು ಮುಂದೆ ಸಮುದಾಯ ಭವನ, ಭಗ್ನಗೊಂಡಿರುವ ವಿಷ್ಣು, ಗಣಪತಿ ಇದ್ದ ಸ್ಥಳದಲ್ಲಿ ಮತ್ತೆ ದೇವಾಲಯ ನಿರ್ಮಿಸಲು ಶ್ರಮಿಸುತ್ತಿದ್ದಾರೆ. ದೇವಾಲಯಕ್ಕೆ ಹೊಂದಿಕೊಂಡಂತಿರುವ ಬೆಟ್ಟದ ಮೇಲೆ ಪರ್ವತ ಮಲ್ಲೇಶ್ವರ ಸ್ವಾಮಿ ಗುಡಿಯೂ ಇದ್ದು, ಕೊಂತಿಹಳ್ಳಿಯ ದಶರಥರಾಮೇಶ್ವರ ಕ್ಷೇತ್ರ ಐತಿಹಾಸಿಕ, ಧಾರ್ಮಿಕವಾಗಿ ಭಕ್ತರ ಗಮನಸೆಳೆದಿದೆ.

 

ನಂದಿ, ಧ್ವಜಸ್ತಂಬ ಪ್ರತಿಷ್ಠಾಪನೆ:

ದೇವಾಲಯದ ಜೀರ್ಣೋದ್ಧಾರದ ಭಾಗವಾಗಿ ಇದೇ ಮೇ 12 ಮತ್ತು 13ರಂದು ಕ್ಷೇತ್ರದಲ್ಲಿ ನೂತನವಾಗಿ ಶಿಲೆಯಲ್ಲಿ ನಿರ್ಮಿಸಿರುವ ನಂದೀಶ್ವರ ಹಾಗೂ ಧ್ವಜಸ್ತಂಭದ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರುತ್ತಿದ್ದು, ಹಿರೇಮಠದ ಡಾ.ಶಿವಾನಂದಶಿವಾಚಾರ್ಯಸ್ವಾಮೀಜಿ, ಬೆಳ್ಳಾವಿ ಕಾರದ ವೀರಸಬಸವಸ್ವಾಮೀಜಿ, ಗದ್ದಿಗೆ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಉದ್ಘಾಟನೆ ನೆರವೇರಿಸುವರು. ಬಿಜೆಪಿ ಮುಖಂಡ ರವೀಶ್ ಅರಕೆರೆ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸಮುದಾಯಭವ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಂಎಲ್ಸಿ ಆರ್.ರಾಜೇಂದ್ರ ಸೇರಿ ಮಾಜಿ ಶಾಸಕರು, ಜಿಪಂ ಮಾಜಿ ಸದಸ್ಯರು, ದೇವಲಾಪುರ ಪಂಚಾಯ್ತಿ ಗ್ರಾಮಗಳ ಪ್ರಮುಖರು, ಭಕ್ತರು ಪಾಲ್ಗೊಳ್ಳುವರು.

PSI ಹುದ್ದೆ ಹಗರಣದ ಪಿತಾಮಹ ಸಿಎಂ ಬೊಮ್ಮಾಯಿ ಎಂದ ಡಿಕೆಶಿ! ಎಚ್​ಡಿಕೆ ಹೇಳಿದ ಆ ಮೂಲ ಕಿಂಗ್​ಪಿನ್​ ಯಾರು?

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ