ಹೆಣ್ಣು ಮಗುವಿಗೆ ಜನ್ಮ ನೀಡಿದ ಕನ್ನಡದ ನಟಿ

ಬೆಂಗಳೂರು : ಕನ್ನಡ ನಟಿ ಪ್ರಣೀತಾ ಸುಭಾಷ್ ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ. ನಟಿ ಪ್ರಣೀತಾ ಸುಭಾಷ್ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ಆಸ್ಪತ್ರೆಯ ಬೆಡ್ ಮೇಲೆ ತನ್ನ ಮಗುವಿನೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಮಗು ಹುಟ್ಟಿದಾಗಿನಿಂದ ನನಗೆ ಇದೆಲ್ಲವೂ ಕನಸಿನಂತೆ ಅನಿಸುತ್ತಿದೆ. ಸ್ತ್ರೀರೋಗ ತಜ್ಞೆ ನನ್ನ ತಾಯಿಯಾಗಿರುವುದು ನನ್ನ ಅದೃಷ್ಟ. ಮಾನಸಿಕವಾಗಿ ಅವಳಿಗೂ ಇದು ತುಂಬಾ ಕಷ್ಟದ ಸಮಯವಾಗಿತ್ತು. ಡಾ.ಸುನೀಲ್ ಈಶ್ವರ್ ಮತ್ತು ಅವರ ತಂಡ ನನಗೆ ಧೈರ್ಯ ತುಂಬಿ ಸುಸೂತ್ರವಾಗಿ ಡೆಲಿವರಿ ನಡೆಯುವಂತೆ ನೋಡಿಕೊಂಡಿದ್ದಾರೆ. ಡಾ.ಸುಬ್ಬು ಮತ್ತು ಅವರ ತಂಡಕ್ಕೂ ವಿಶೇಷ ಧನ್ಯವಾದಗಳು. ಇದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳದೆ ಇರಲು ಮನಸು ಬರಲಿಲ್ಲ ಎಂದು ಪೆÇೀಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಮಗುವಿನ ಮುಖ ತೋರಿಸಿಲ್ಲ. ಅಮ್ಮನಾದ ಪ್ರಣೀತಾಗೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟ್ಟಿಗರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ತಮ್ಮ ಇನ್ಸ್‍ಸ್ಟಾ ಗ್ರಾಂ ಮತ್ತು ಟ್ವಿಟರ್ ಖಾತೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಕುರಿತು ತನ್ನ ಅಭಿಮಾನಿಗಳ ಜೊತೆಗೆ ಸಂತಸವನ್ನು ಹಂಚಿಕೊಂಡಿದ್ದಾರೆ

ಒಂದೆಡೆ ಸಿನಿಮಾ ಮಾಡುತ್ತಲೇ ಇನ್ನೊಂದೆಡೆ ಹಲವು ಸೇವಾ ಕಾರ್ಯಕ್ರಮಗಳಿಂದ ಜನಮೆಚ್ಚುಗೆ ಗಳಿಸಿದ ಪ್ರಣಿತಾ ಕಳೆದ ಕೊರೊನಾ ಲಾಕ್‍ಡೌನ್‍ನಲ್ಲಿ ಉದ್ಯಮಿ ನಿತಿನ್ ರಾಜು ಅವರನ್ನು ಸರಳವಾಗಿ ವಿವಾಹವಾದರು. ತನ್ನ ಸೀಮಂತ ಹಾಗೂ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿ ತಾಯಿಯಾಗುವುದರ ಸಂತಸವನ್ನು ಹಂಚಿಕೊಂಡಿದ್ದರು.

Recent Articles

spot_img

Related Stories

Share via
Copy link