ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿ ರೀಲ್ಸ್ ಮಾಡಿದರೆ ಬೀಳುತ್ತೆ ಬಾರಿ ದಂಡ ಹುಶಾರ್..!

 

ಪೊಲೀಸರ ಸೋಶಿಯಲ್ ಮೀಡಿಯಾ ಸೆಲ್ ಸದಾ ನಿಮ್ಮ ರೀಲ್ಸ್ ಮೇಲೆ ಕಣ್ಣಿಟ್ಟಿರುತ್ತೆ ಹುಶಾರ್..!

ಬೆಂಗಳೂರು : ಕೆಲವರು ಶೋಕಿಗಾಗಿ ರೀಲ್ಸ್ ಗಳನ್ನು ಮಾಡುತ್ತಾ ಮಾಡುತ್ತಾ ನಮಗೆ ನಾವೇ ಸ್ಟಾರ್ಸ್ ಅಂದುಕೊಂಡಿರುತ್ತಾರೆ, ಒಂದು ವೇಳೆ ಹಾಗೆ ಅಂದುಕೊಂಡಿದ್ದರೆ ತಪ್ಪೇನಿಲ್ಲ ಬಿಡಿ. ಆದರೆ ಅದೇ ನಶೆ ತಲೆಗೆ ಏರುತ್ತಿದ್ದಂತೆ, ಟ್ರಾಫಿಕ್ ನಿಯಮಗಳನ್ನೇ ಮರೆತು ಹೋಗುತ್ತಾರೆ. ಹಾಗಾಗಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿ ವೀಲಿಂಗ್ ಮಾಡಿರುವ ರಾಶಿ ರಾಶಿ ವಿಡಿಯೋಗಳನ್ನ ಸಾಮಾಜಿಕ ಜಾಲಾತಾಣದಲ್ಲಿ ತುಂಬುವ ವ್ಯಕ್ತಿಗಳಿಗೆ ಸರಿಯಾದ ಶಾಸ್ತಿ ಮಾಡಲು ಪೊಲೀಸರ ಸೋಶಿಯಲ್ ಮೀಡಿಯಾ ಸೆಲ್ ಸದಾ ನಿಮ್ಮ ರೀಲ್ಸ್ ಮೇಲೆ ಕಣ್ಣಿಟ್ಟಿರುತ್ತೆ ಹುಶಾರ್..!

ಶೋಕಿಗಾಗಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಯುವಕರ ಕತೆ ಮುಗಿಯಿತು ಅಂತಾನೇ ಅರ್ಥ. ಯಾಕೆಂದರೆ ಪೊಲೀಸರು ಗೊತ್ತಿಲ್ಲದೆ ನಿಮ್ಮ ಬಂಧನಕ್ಕೆ ಬಲೆ ಬೀಸುತ್ತಾರೆ, ಅದಕ್ಕಾಗಿಯೇ ಸೋಶಿಯಲ್ ಮೀಡಿಯಾ ಸೆಲ್ ಸದಾ ಸಾಮಾಜಿಕ ಜಾಲಾತಾಣದ ಮೆಲೆ ಕಣ್ಣು ಇಟ್ಟಿರುತ್ತದೆ.

ದಂಡ ಪಿಕ್ಸ್ : ಅಬ್ಬಬ್ಬಬ್ಬಾ ಅದೇನ್ ಸ್ಟೈಲಿಶ್ ರೈಡಿಂಗ್. ಅದೇನ್ ಡೈಲಾಗ್ ಡಿಲವರಿ. ಇವನ ನೀತಿ ಪಾಠ ಕೇಳಿ ಅದೆಷ್ಟೋ ಜನ ಶಹಬ್ಬಾಶ್ ಹೇಳಿರಬಹುದು . ಹಾಸ್ಯ ನೋಡಿ ನಕ್ಕಿರಬಹುದು. ಆದರೆ ಇದೇ ಭರದಲ್ಲಿ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿ ಸರಿಯಾದ ದಂಡ ಹಾಕಿಸಿಕೊಂಡಿದ್ದಾನೆ. ಅದು ಅಷ್ಟಿಷ್ಟಲ್ಲ ಬರೋಬ್ಬರಿ 17,500 ರೂಪಾಯಿ. ಇದು ಒಂದು ಕಡೆ ಆದರೆ ವ್ಹೀಲಿಂಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದ, ಆಸಾಮಿಗಳಿಗೂ ಬೆಂಗಳೂರು ಪೆÇಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ವೀಲಿಂಗ್ ಮಾಡಿ ಅಪ್ ಲೋಡ್ ಮಾಡುವವರೇ ಹುಶಾರ್ : ಇದು ಕೇವಲ ರೀಲ್ಸ್ ಮಾಡುವವರಿಗೆ ಮಾತ್ರವಲ್ಲ, ವ್ಹೀಲಿಂಗ್ ಮಾಡುವವರಿಗೂ ಅನ್ವಯಿಸುತ್ತೆ. ವೀಲಿಂಗ್ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುವವರ ವಿರುದ್ಧವೂ ಪ್ರಕರಣ ದಾಖಲಾಗುತ್ತಿದೆ. ಕಳೆದ ವಾರ 40 ವ್ಹೀಲಿಂಗ್ ಪ್ರಕರಣಗಳನ್ನು ಸಂಚಾರಿ ಪೊಲೀಸರು ದಾಖಲಿಸಿ ಎಚ್ಚರಿಕೆಯನ್ನು ನೀಡಿದ್ದಾರೆ.

ಸಮಾಜಕ್ಕೆ ತೊಂದರೆ ಕೊಡಬಾರದು : ಅದು ಎನೇ ಆಗಲಿ ಸಮಾಜದಲ್ಲಿ ಇತರರಿಗೆ ತೊಂದರೆ ಕೊಡುವ ಯಾವುದೇ ಕೆಲಸವನ್ನು ಮಾಡಬಾರದು, ಎಲ್ಲರೂ ಕಾನೂನಿನ ಚೌಕಟ್ಟಿನ ಒಳಗೆ ನಮ್ಮ ನಮ್ಮ ಕೆಲಸ ಮಾಡಿಕೊಂಡರೆ ಒಳ್ಳೆಯದು ಇಲ್ಲವಾದಲ್ಲಿ ಭಾರೀ ದಂಡವನ್ನು ವೀಲಿಂಗ್ ಮಾಡಿ, ಹುಚ್ಚಾಟ ಮಾಡುವ ಯುವಕರು ಕಟ್ಟಬೇಕು ಎಂದು ಅಧಿಕಾರಿಗಳು ಎಚ್ಚರಿಕೆಯನ್ನು ನಿಡಿದ್ದಾರೆ.

ಹೌದು, ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು, ಬೈಕ್ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೆ ಚಾಲನೆ ಮಾಡುವುದು. ಇಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದರೆ, ಅವುಗಳ ಆಧಾರದ ಮೇಲೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ. ಇಂತಹ ವಿಡಿಯೋಗಳನ್ನು ಮಾನಿಟರ್ ಮಾಡಲು ಇರುವ ಸೋಶಿಯಲ್ ಮೀಡಿಯಾ ಸೆಲ್ ನವರು ಕಳೆದ ವರ್ಷ 44 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇನ್ನು ರೀಲ್ಸ್ ಮಾಡುವ ಯುವಕ ದಚ್ಚು ಎಂಬುವರಿಗೆ ಸಂಚಾರಿ ಪೊಲೀಸರು 17,500 ರೂ ದಂಡ ವಿಧಿಸಿದ್ದಾರೆ. ವಿಪರ್ಯಾಸ ಅಂದರೆ ಅದನ್ನೂ ರೀಲ್ಸ್ ಮಾಡುವ ಮೂಲಕವೇ ಹೇಳಿಕೊಂಡಿದ್ದಾನೆ.

-ದಚ್ಚು ,ರೀಲ್ಸ್ ಮಡುವ ಯುವಕ

ಇನ್ ಸ್ಟಾಗ್ರಾಮ್ ನೋಡಬೇಕು ಎಂದು ಅನೇಕರು ಶೊಕಿ ಮಾಡಿ ವೀಡಿಯೋ ಹಾಕಿರುತ್ತಾರೆ, ಟ್ರಾಫಿಕ್ ಪೊಲೀಸರ ಸೋಶಿಯಲ್ ಮೀಡಿಯಾ ಸೆಲ್ ಇದ್ದು. ಟ್ರಾಫಿಕ್ ನಿಯಮ ಉಲ್ಲಂಘಿಸಿ ರೀಲ್ಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದರೆ, ಅವರ ವಾಹನ ನಂಬರ್ ಆಧಾರದ ಮೇಲೆ ಫೈನ್ ಹಾಕುತ್ತೇವೆ. ಎಂದು ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ ಎಚ್ಚರಿಕೆ ಕೊಟ್ಟಿದ್ದಾರೆ.

-ಡಾ. ಬಿ.ಆರ್. ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತರು, ಸಂಚಾರ ವಿಭಾಗ.

Recent Articles

spot_img

Related Stories

Share via
Copy link