ಜನ ಸಾಮಾನ್ಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟ ಸರ್ಕಾರ
ಬೆಂಗಳೂರು : ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಬುಧವಾರ ಪ್ರತಿ ಸಿಲಿಂಡರ್ಗೆ 50 ರೂ. ಏರಿಕೆ ಮಾಡಲಾಗಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ 1,053 ರೂ. ತಲುಪಿದೆ. ಇದೀಗ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ 1,052.50 ರೂ.ಗೆ ಮುಟ್ಟಿದೆ.
ಬೆಂಗಳೂರಿನಲ್ಲಿ ಎಲ್.ಪಿ.ಜಿ ಸಿಲಿಂಡರ್ ದರ ಎಷ್ಟು?
ಬೆಂಗಳೂರಿನಲ್ಲಿ 14.2 ಕಿಗ್ರಾಂ ತೂಕದ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ಈ ಹಿಂದೆ ಪ್ರತಿ ಸಿಲಿಂಡರ್ಗೆ 1005.50 ರೂ. ಇತ್ತು. ಈಗ 50 ರೂ. ಏರಿಕೆಯೊಂದಿಗೆ 1055.50 ರೂ. ತಲುಪಲಿದೆ.
ಪ್ರಮುಖ ಅಂಶಗಳು :
ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ
ಬುಧವಾರ ಪ್ರತಿ ಸಿಲಿಂಡರ್ ದರ 50 ರೂ. ಹೆಚ್ಚಳ ಮಾಡಿದ್ದಾರೆ
ಬೆಂಗಳೂರಿನಲ್ಲಿ 1,055.50 ರೂ. ತಲುಪಿದ ಸಿಲಿಂಡರ್ ದರ.