ಅನಧಿಕೃತ ಮಣ್ಣು ಗಣಿಗಾರಿಕೆ: ಆರೋಪಿಗಳಿಗೆ ಶಿಕ್ಷೆ

ತುಮಕೂರು:

     ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ಆರೋಪಿಗಳಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ವರ್ಷ ಶಿಕ್ಷೆ ಹಾಗೂ 1,00,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.

     ದೇವರಾಯನದುರ್ಗ ನಾಮದ ಚಿಲುಮೆ ವ್ಯಾಪ್ತಿಯಲ್ಲಿನ ಗ್ರಾಮಗಳ ಸುತ್ತಮುತ್ತಲ ಗೋಮಾಳ ಪ್ರದೇಶದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮಣ್ಣು ಗಣಿಗಾರಿಕೆ ಮಾಡುತ್ತಿದ್ದಾರೆಂಬ ದೂರಿನ ಮೇರೆಗೆ ದಿ.7.7.2021 ರಂದು ತುಮಕೂರು ತಾಲ್ಲೂಕು ಕದರನಹಳ್ಳಿ ಗ್ರಾಮಕ್ಕೆ ಭೂ ವಿಜ್ಞಾನಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿ ಕದರನಹಳ್ಳಿ ಗ್ರಾಮದ ಸ.ನಂ.77 ರಲ್ಲಿ ರಾಜಣ್ಣ, ಶ್ರೀನಿವಾಸ ಇವರುಗಳ ಹೆಸರಿನಲ್ಲಿ 4.02 ಎಕರೆಯಷ್ಟು ಜಂಟಿ ಖಾತೆ ಪಹಣಿ ಹೊಂದಿದ್ದು, ಮಣ್ಣು ಗಣಿಗಾರಿಕೆ ನಡೆಸಿ, ಸಾಗಾಣಿಕೆ ಮಾಡುತ್ತಿದ್ದರು. ಇದು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿಯ ಉಲ್ಲಂಘನೆಯಾಗಿತ್ತು.

      ಇದೇ ಸ.ನಂ.ನಲ್ಲಿ ಕೃಷಿಗಾಗಿ ಮಣ್ಣನ್ನು ಅನುಮತಿ ಇಲ್ಲದೆ ಬಳಸಿಕೊಂಡಿದ್ದು, ಸಂಬAಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೆ ಗಣಿಗಾರಿಕೆ ನಡೆಸಿ ಮಣ್ಣನ್ನು ಸಾಗಾಣಿಕೆ ಮಾಡಿದ್ದು, ಅಂದಾಜು ಸುಮಾರು 3375 ಮೆ.ಟನ್ ನಷ್ಟು ಸಾಗಾಣಿಕೆ ಮಾಡಿರುತ್ತಾರೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಸಂತೋಷ್ ಕುಮಾರ್ ಬಿ.ಸಿ. ಇವರು ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದರು.

     ಪ್ರಕರಣದ ವಿಚಾರಣೆಯು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಕೆ.ಬಿ.ಗೀತಾ ಅವರು ದಿ: 2.2.2023 ರಂದು ಆರೋಪಿಗಳಿಗೆ ಮಣ್ಣು ಗಣಿಗಾರಿಕೆ ಸಂಬAಧ 1 ವರ್ಷ ಶಿಕ್ಷೆ ಹಾಗೂ ರೂ.1,00,000 ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಣಮಂತರಾಯ ತಳಕೇರಿ ಅವರು ವಾದ ಮಂಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link