ಕೆಂಕೆರೆ : ಕಾಳಮ್ಮ ದೇವಿಯ ಒಡವೆ ಕಳವು..!

ಹುಳಿಯಾರು:

     ಹುಳಿಯಾರು ಸಮೀಪದ ಕೆಂಕೆರೆಯ ಕಾಳಮ್ಮ ದೇವಸ್ಥಾನದ ಬೀಗ ಹೊಡದು ಕೊಟ್ಯಾಂತರ ರೂ. ಬೆಲೆ ಬಾಳುವ ದೇವರ ಒಡವೆಗಳನ್ನು ಕದ್ದೊಯ್ದಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.

    ಕಾಳಮ್ಮ ದೇವಸ್ಥಾನ ಬಾಗಿಲ ಬೀಗ ಹೊಡೆದಿರುವ ಕಳ್ಳರು ದೇವರ ಮೂರ್ತಿಯ ಮೇಲಿದ್ದ ಮಣಿ ಒಂದನ್ನು ಬಿಟ್ಟು ಬಂಗಾರದ ದೇವರ ಮುಖಪದ್ಮ, ಛತ್ರಿ ಸೇರಿದಂತೆ ಅಂದಾಜು ಎರಡ್ಮೂರು ಕೋಟಿ ರೂ. ಮೌಲ್ಯದ ಭಕ್ತರು ಮಾಡಿಸಿಕೊಟ್ಟಿದ್ದ ಒಡವೆಗಳನ್ನು ಕದ್ದಿದ್ದಾರೆ.

    ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ತಮ್ಮ ಕಳ್ಳತನದ ಕೃತ್ಯ ದಾಖಲಾಗಬಾರದೆಂದು ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರವನ್ನು ಸಹ ಕಿತ್ತು ಹಿರಿಯೂರು ರಸ್ತೆಯಲ್ಲಿ ಸೇತುವೆಯ ಬಳಿ ಎಸೆದು ಹೋಗಿದ್ದಾರೆ.

    ಈ ಆಘಾತಕಾರಿ ವಿಷಯ ತಿಳಿಯುತ್ತಿದ್ದಂತೆ ಹಳ್ಳಿಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ದೇವಸ್ಥಾನದ ಬಳಿ ಜಮಾವಣೆಗೊಂಡರು. ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್‌ಪಿ ರಾಹುಲ್ ಕುಮಾರ್ ಸೇರಿದಂತೆ ಅಧಿಕಾರಿಗಳ ದಂಡು ಆಗಮಿಸಿ ಘಟನೆಯ ವಿವರ ಪಡೆದಿದ್ದಾರೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link