ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ :ಟೋಲ್‌ ಮುಕ್ತಗೊಳಿಸಿ :ಎಂ.ಲಕ್ಷ್ಮಣ್

ಮೈಸೂರು: 

      ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿರುವ  ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಮೂಲಕ ಪ್ರಯಾಣ ಮಾಡಲು 800 ರೂಪಾಯಿಗಳನ್ನು ಟೋಲ್‌ನಲ್ಲಿ ಪಾವತಿಸಬೇಕಾಗುತ್ತದೆ ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

        118 ಕಿಮೀ ದೂರವನ್ನು 90 ನಿಮಿಷದಲ್ಲಿ ಕ್ರಮಿಸಲು ಸಹಾಯವಾಗುತ್ತದೆ ಎಂದು ಹೇಳುವ ಸರ್ಕಾರ ಟೋಲ್‌ ಎಷ್ಟು ಎಂದು ಮಾಹಿತಿ ನೀಡಿಲ್ಲ.ಇರುವ ಎರಡು ಟೋಲ್ ಪ್ಲಾಜಾಗಳಾದ ಕೆ ಶೆಟ್ಟಿಹಳ್ಳಿ ಬಳಿಯ ಗಣಗೂರು ಮತ್ತು ಇನ್ನೊಂದು ಕುಂಬಳಗೋಡು ಬಳಿ ಎತ್ತರದ ಸ್ಟ್ರೆಚ್‌ಗಳಲ್ಲಿ ಸ್ಥಾಪಿಸಲಾಗಿದೆ. ಪ್ರತಿ ಕಿ.ಮೀ.ಗೆ ಸರಾಸರಿ 3 ರಿಂದ 4 ರೂ. ಆಗಿರುತ್ತದೆ ಎನ್ನಲಾಗಿದೆ. ಹೀಗಾಗಿ, ಪ್ರಯಾಣಿಕರು ಒಂದು ಮಾರ್ಗವಾಗಿ 380 ರಿಂದ 400 ರೂ. ವರೆಗೆ ಟೋಲ್ ಪಾವತಿಸಬೇಕಾಗುತ್ತದೆ. ಒಟ್ಟು 800 ರೂ. ಪಾವತಿಸಿ ಪ್ರಯಾಣಿಸಬೇಕಾಗುತ್ತದೆ ಎಂದರು.

    ಯೋಜನಾ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಂಚಿಕೊಂಡಿರುವುದರಿಂದ, ಕಾಂಗ್ರೆಸ್ ನಾಯಕರ ಧೈರ್ಯವನ್ನು ಸದಾ ಪ್ರಶ್ನಿಸುವ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಧೈರ್ಯವನ್ನು ಪ್ರದರ್ಶಿಸಿ ಎಕ್ಸ್‌ಪ್ರೆಸ್‌ವೇಯನ್ನು ಟೋಲ್ ಮುಕ್ತಗೊಳಿಸಬೇಕು ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link