ಸಂವಿಧಾನ ವ್ಯವಸ್ಥೆ ಬಗ್ಗೆ ಅಮಿತ್‌ ಶಾಗೆ ಗೊತ್ತೇ..? : ಹೆಚ್‌ ಡಿ ಕೆ ಪ್ರಶ್ನೆ

ಧಾರವಾಡ:

   ನಮಗೆ ಜನ ಅಧಿಕಾರ ಕೊಟ್ಟಾಗ ಜನರು ಮತ್ತು ರೈತರ ಪರವಾಗಿ ನಾವು ಧ್ವನಿ ಎತ್ತಿದ್ದೆವು ಬಿಟ್ಟರೆ ಎಂದಿಗೂ ನಾವು ಬಿಜೆಪಿಯವರಂತೆ ಎಂದೂ ಹತ್ಯಾರಾಜಕೀಯ ಮಾಡಿಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ನಗರದ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅಧಿಕಾರ ಸಿಕ್ಕಾಗ ರೈತರ ಸಾಲ ಮನ್ನಾ ಮಾಡಿದ್ದೇವೆ. ಪ್ರಾಮಾಣಿಕ ವಾಗಿ ಜನಗಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ ಬಿಜೆಪಿ ನಾಯಕರಂತೆ ಅಮಾಯಕರನ್ನು ಬಲಿ ಪಡೆದು ರಾಜಕೀಯ ಮಾಡಿಲ್ಲ. ಹೀಗಾಗಿ ರಾಜ್ಯ ಹಾಗೂ ದೇಶದಲ್ಲಿ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ ಎಂದರು.

   ಭಾರತದ ಸಂವಿಧಾನದಲ್ಲಿ ಯಾರು ಯಾವ ವೃತ್ತಿಯಾದರೂ ಆರಿಸಿಕೊಳ್ಳಬಹುದು. ಚುನಾವಣೆ ಬಂದಾಗ ಯಾರಾದರೂ ನಿಲ್ಲಬಹುದು. ಸಂವಿಧಾನದ ವ್ಯವಸ್ಥೆ ಬಗ್ಗೆ ಅಮಿತ್ ಶಾ ತಿಳಿದುಕೊಂ ಡಿದ್ದಾರಾ. ಇದನ್ನ ನಾನು ಅವರಿಗೆ ಕೇಳಲು ಬಯಸುತ್ತೇನೆ. ಜನರ ಆಶೀರ್ವಾದಿಂದ ಜನಪ್ರತಿನಿಧಿ ಆಗ್ತಾರೆ. ನಾವು ಯಾರೂ ಹಿಂಬಾಗಿಲಲ್ಲಿ ಪ್ರವೇಶ ಮಾಡಿಲ್ಲ. ಜನ ಸ್ವೀಕಾರ ಮಾಡಿದ ಮೇಲೆ ನಾವು ಜನಪ್ರತಿನಿಧಿ ಆಗಿದ್ದೇವೆ. ಅದಕ್ಕೆ ನಾವು ಇವರಿಂದ ಪರ್ಮೀಷನ್ ತಗೊಬೇಕಾ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link