ತುಮಕೂರು
ಎಸ್.ಹರೀಶ್ ಆಚಾರ್ಯ
ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರವನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸಿರುವುದು ಸರಿಯಷ್ಟೇ. ಜಿಲ್ಲೆಯಾದ್ಯಂತ ಈ ಸಂಬAಧ 63,735 ನೋಂದಾಯಿತ ರೈತರ ಪೈಕಿ ಫೆ.11ರವರೆಗೆ 13,289 ಮಂದಿ ರೈತರು 2,01,355 ಕ್ವಿಂಟಾಲ್‌ನಷ್ಟು ರಾಗಿಯನ್ನು ಮಾರಾಟ ಮಾಡಿದ್ದು, ರಾಗಿ ಮಾರಲು ಸರತಿಯಲ್ಲಿ ದಿನಗಟ್ಟಲೆ ನಿಂತು ಕಾಯುವ ದುಸ್ಥಿತಿ ಒಂದೆಡೆಯಾದರೆ, ಮಧ್ಯವರ್ತಿಗಳ ಹಾವಳಿ ರೈತರಿಗೂ, ಅಧಿಕಾರಿಗಳಿಗೂ ತಲೆನೋವಾಗಿದೆ.
ಹೌದು ಸರ್ಕಾರವೇನೋ ಕ್ವಿಂಟಾಲ್‌ಗೆ 3578 ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಆದೇಶಿಸಿ ಜಿಲ್ಲೆಯ 11 ಕಡೆ ಖರೀದಿ ಕೇಂದ್ರಗಳನ್ನು ತೆರೆದು ನೋಂದಾವಣಿಗೆ ಅವಕಾಶ ಕಲ್ಪಿಸಿ, ಅರ್ಹ ಪ್ರತೀ ರೈತರಿಂದ 20 ಕ್ವಿಂಟಾಲ್ ಮಿತಿಗೊಳಪಟ್ಟು ರಾಗಿ ಖರೀದಿಗೆ ಮುಂದಾಗಿದೆ. ಜ.15 ರಿಂದ ದಿನಕ್ಕೊಂದು ಕೇಂದ್ರವೆAಬAತೆ ಖರೀದಿ ಪ್ರಕ್ರಿಯೆ ಜಿಲ್ಲೆಯ 11 ಕೇಂದ್ರದಲ್ಲಿ ಆರಂಭಗೊAಡಿದ್ದು, ಮಾ.31ರವರೆಗೆ ಮಾರಾಟಕ್ಕೆ ಕಾಲಾವಕಾಶ ಕಲ್ಪಿಸಲಾಗಿದೆ.
ಸಂಕ್ರಾಂತಿ ಸುಗ್ಗಿಯ ವೇಳೆ ರಾಗಿ ರಾಶಿಗೆ ಪೂಜೆ ಮಾಡಿ ಫಸಲನ್ನು ಮೂಟೆಗೆ ತುಂಬಿ, ಎತ್ತಿನಗಾಡಿಯಲ್ಲಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ತರುತ್ತಿರುವ ರೈತರು ಬೇಗ ಮಾರಾಟ ಮಾಡಿ ಖಾತೆಗೆ ಹಣ ಜಮೆ ಮಾಡಿಸಿಕೊಳ್ಳಲು ತವಕಿಸುತ್ತಿದ್ದಾರೆ.
ಆದರೆ ಖರೀದಿ ಕೇಂದ್ರಗಳ ಬಳಿ ಅಧಿಕ ಸಂಖ್ಯೆಯ ರೈತರ ಜಮಾವಣೆಯಿಂದಾಗಿ ಕಿ.ಮೀ.ನಷ್ಟು ಸರತಿ ಸಾಲುಗಳು ಕಂಡುಬರುತ್ತಿದ್ದು, ಮಧ್ಯವರ್ತಿಗಳ ಹಾವಳಿ, ಕಮಿಷನ್ ಬೇಡಿಕೆಯೂ ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸ್ವಂತ ಎತ್ತಿನಗಾಡಿ ಹೊಂದಿರದ ರೈತರು ಮರ‍್ನಾಲ್ಕು ಮಂದಿ ಸೇರಿ ಬಾಡಿಗೆ ಟ್ರಕ್‌ಗಳನ್ನು ಮಾಡಿಕೊಂಡು ಖರೀದಿ ಕೇಂದ್ರಗಳ ಬಳಿ ಬಂದು ಮಾರಾಟಕ್ಕೆ ದಿನಗಟ್ಟಲೇ ಕಾಯುವಂತಾಗಿದ್ದು, ಊಟ,ತಿಂಡಿ, ಶೌಚಾಲಯಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಮ್ಮ ಸರದಿ ಯಾವಾಗ ಬರುತ್ತದೋ ಎಂದು ರಸ್ತೆಯಲ್ಲೇ , ಬಂಡಿ ನಿಲ್ಲಿಸಿಕೊಂಡು ಕಾಯುತ್ತಿರುವ ಅನ್ನದಾತರು, ಖರೀದಿ ವಿಳಂಬವಾದಷ್ಟು ನಮಗೆ ಬಾಡಿಗೆ ದರದ ಹೊರೆ ಹೆಚ್ಚಾಗುತ್ತದೆ. ಮಧ್ಯವರ್ತಿಗಳ ಕಾಟದ ಜೊತೆಗೆ, ಕೆಲವೆಡೆ ಖರೀದಿ ಸಿಬ್ಬಂದಿಯೂ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಅವಲತ್ತುಕೊಳ್ಳುತ್ತಿದ್ದಾರೆ.
ಮಧ್ಯವರ್ತಿಗಳ ಕಾಟ:
ಟ್ರ್ಯಾಕ್ಟರ್ ಇಲ್ಲವೇ ಬಂಡಿ ಮಾಡಿಕೊಂಡು ನೇರವಾಗಿ ಖರೀದಿ ಕೇಂದ್ರಕ್ಕೆ ಬರಲಾಗದ ರಾಗಿ ಬೆಳೆಗಾರರನ್ನೇ ಟಾರ್ಗೆಟ್ ಮಾಡುವ ಮಧ್ಯವರ್ತಿಗಳು ಅವರಿಂದ ಕಡಿಮೆ ಬೆಲೆಗೆ ಖರೀದಿ ಒಳ ಒಪ್ಪಂದ ಮಾಡಿಕೊಂಡು, ರೈತರ ಹೆಸರಿನ ಪಹಣಿ ಪಡೆದು ತಾವೇ ಖರೀದಿ ಕೇಂದ್ರಕ್ಕೆ ರಾಗಿ ತಂದು ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿದೆ. ಈ ಕುರಿತು ಖರೀದಿ ಕೇಂದ್ರದ ಸಿಬ್ಬಂದಿ ಅಧಿಕಾರಿಗಳನ್ನು ಕೇಳಿದರೆ, ಖರೀದಿ ಕೇಂದ್ರಕ್ಕೆ ಬರುವ ರೈತರು, ಯಾರು? ಮಧ್ಯವರ್ತಿಗಳು ಯಾರು ಎಂಬುದನ್ನು ಗುರುತಿಸಲು ಅಸಾಧ್ಯ ವಾಗಿದ್ದು, ನೋಂದಾಯಿಸಿದ ರೈತರ ಪಹಣಿ ಆಧರಿಸಿ ರಾಗಿಯನ್ನು ಖರೀದಿ ಮಾಡಲೆಬೇಕಾಗುತ್ತದೆ.
ರೈತರಲ್ಲ ಎಂದು ವಾಪಸ್ ಕಳುಹಿಸಿದರೆ ಗಲಾಟೆ, ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಹೇಳುತ್ತಿದ್ದಾರೆ.ಇನ್ನೂ ಆಗಿಂದಾಗ್ಗೆ ಕೈ ಕೊಡುವ ಸರ್ವರ್ ಸಮಸ್ಯೆಯೂ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯನ್ನು ವಿಳಂಬವಾಗಿಸುತ್ತಿದ್ದು, ರೈತರು ತರುವ ರಾಗಿಯನ್ನು ತೇವಾಂಶದ ಆಧಾರದಲ್ಲಿ ಗ್ರೇಡಿಂಗ್ ಮಾಡಿ