ಬೆಂಗಳೂರು :
ಖ್ಯಾತ ಶಾಸ್ತ್ರೀಯ ಗಾಯಕರಾದ ಶ್ರೀಯುತ ವಿಜಯ್ ಕಿಚ್ಲು ಅವರು ಶುಕ್ರವಾರ ಹೃದಯ ಸಂಬಂಧಿ ಖಾಯಿಲೆಯಿಂದ ನಿಧನರಾದರು.
ಕೋಲ್ಕತ್ತಾದಲ್ಲಿನ ವುಡ್ಲ್ಯಾಂಡ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ ಅವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪ್ರಾರಂಭವಾಗುವ ಮೊದಲು ಅವರು ಹೃದಯ ಸ್ತಂಭನದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಜನವರಿಯಲ್ಲಿ ಎರಡು ವಾರಗಳ ಕಾಲ ಹೃದಯ ವೈಫಲ್ಯದಿಂದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಿಚ್ಲು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುಪದ್ ಮತ್ತು ಖಯಾಲ್ ಪ್ರಕಾರಗಳನ್ನು ಅಧ್ಯಯನ ಮಾಡಿದವರು. ಹೊಸ ಕಲಾವಿದರನ್ನು ಉತ್ತೇಜಿಸಲು ಹೆಸರುವಾಸಿಯಾಗಿದ್ದರು.
