ಶಿವರಾತ್ರಿ ದಿನ ಸಿಡಿದೆದ್ದ ಮೋದೂರು ಶಂಕರನ ಭಕ್ತರು
ಕುಣಿಗಲ್
ಪ್ರಾಣ ಬೇಕಾದರೂ ಕೊಟ್ಟೇವೂ, ಆದರೆ ಇಲ್ಲಿ ಕಲ್ಲುಗಣಿಗಾರಿಗೆ ನಡೆಸಲು ಬಿಡುವುದಿಲ್ಲ. ಕಲ್ಲು ಗಣಿಗಾರಿಕೆಯಿಂದ ಪುರಾತನ ದೇವಸ್ಥಾನಕ್ಕೆ ಧಕ್ಕೆ ಉಂಟಾಗಲಿದೆ, ಜಿಲ್ಲಾಡಳಿತ ಅನುಮತಿ ನೀಡಿದರೆ ಈ ಭಾಗದ ಹತ್ತಾರು ಗ್ರಾಮಸ್ಥರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲ್ಲೂಕಿನ ಮೋದೂರು ಗ್ರಾಮದ ಬಳಿ ಬೆಟ್ಟದ ತುದಿಯಲ್ಲಿರುವ ಪುರಾತನ ಪ್ರಸಿದ್ಧ ಶಂಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದವು.
ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಶಿವರಾಮಯ್ಯ ಮಾತನಾಡಿ, ಬೆಟ್ಟದ ತುದಿಯಲ್ಲಿ ಪ್ರಕೃತಿ ಸೌಂದರ್ಯದ ನಡುವೆ ಪ್ರಶಾಂತವಾದ ವಾತವಾರಣದಲ್ಲಿ ಶಂಕರೇಶ್ವರ ಸ್ವಾಮಿ ದೇವಸ್ಥಾನ ಇರುವುದರಿಂದ ಎಲ್ಲ ಭಕ್ತರನ್ನು ತನ್ನತ ಸೆಳೆಯುವ ಸುಂದರ ಪುಣ್ಯ ಕ್ಷೇತ್ರವಾಗಿದೆ. ಬೆಟ್ಟದ ತುದಿಯಲ್ಲಿ ಬಂಡೆ ಮೇಲಿರುವ ಪುರಾತನ ದೇವಸ್ಥಾನವನ್ನು ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರ ಸಹಕಾರದಿಂದ ಸುಂದರವಾದ ದೇವಸ್ಥಾನ ನಿರ್ಮಿಸಲಾಗಿದೆ. ಕಾಡಿನ ಮಧ್ಯದಲ್ಲಿರುವ ದೇವಸ್ಥಾನ, ಪ್ರÀಕೃತಿ ಸೌಂದರ್ಯ ಎಲ್ಲವೂ ತುಂಬಾ ಚೆನ್ನಾಗಿದೆ. ಮನಸ್ಸಿಗೆ ಹಿತ ಎನ್ನಿಸಿ ನಿರಾಳವಾಗುವ ವತಾವರಣ ಇದೆ. ಬೆಟ್ಟದ ಮೇಲಿರುವ ಕೊಳದಲ್ಲಿ ಎಂತಹ ಬರಗಾಲ ಬಂದರೂ ನೀರು ಬತ್ತದೆ ಇರುವುದು ಶಂಕರೇಶ್ವರ ಸ್ವಾಮಿಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕಲ್ಲುಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಧಕ್ಕೆ : ದೇವಸ್ಥಾನ ಇರುವ ಸುತ್ತಮುತ್ತ ಕಾಡಿನಲ್ಲಿ 3-4 ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ಹೀಗೆ ಮುಂದುವರಿದರೆ ಪುರಾತನ ಶಂಕರೇಶ್ವರ ಸ್ವಾಮಿ ದೇವಸ್ಥಾನಕ್ಕೂ ಕಂಟಕವಾಗಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ದೇವಸ್ಥಾನದ ಸಮೀಪವೆ ಕಲ್ಲು ಗಣಿಗಾರಿಕೆ ಅನುಮತಿ ಕೋರಿ ಧಂದೆ ಕೋರರು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದೆಂದು ಆಗ್ರಹಿಸಿದರು. ಟ್ರಸ್ಟ್ ವತಿಯಿಂದ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಜೊತೆಗೆ ಕಲ್ಲು ಗಣಿದಾರರು ಹಣದ ಆಮೀಷವನ್ನು ಸಹ ನೀಡಿದ್ದಾರೆ, ಆದರೆ ಟ್ರಸ್ಟ್ನವರು ಯಾರೂ ಕೂಡ ಆಮೀಶಕ್ಕೆ ಒಳಗಾಗಿಲ್ಲ.
ಸಾವಿರಾರ ಮಂದಿ ಬೆಟ್ಟ ಏರಿ ದರ್ಶನ:-
ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಅಂಲಕಾರ ಎರ್ಪಡಿಸಲಾಗಿತ್ತು. ಅಗ್ನಿ ಪ್ರತಿಷ್ಠೆ ಮಹಾಗಣಪತಿ ನವಗ್ರಹ ಹಾಗೂ ರುದ್ರ ಹೋಮ ನಡೆಸಲಾಯಿತು. ಸಂತೆಮಾವತ್ತೂರು, ಮೊದೂರು, ಕಲ್ಲನಾಯಕನಲ್ಲಿ, ಹೆಗ್ಗಡತಹಳ್ಳಿ, ಹಂದಲಕುಪ್ಪೆ, ನಂಜೇಗೌಡನಪಾಳ್ಯ, ಕದರಾಪುರ, ಅರೇಪಾಳ್ಯ ಕೆಂಪನಹಳ್ಳಿ, ಗೊಲ್ಲರಹಟ್ಟಿ, ಅಂಗರಹಳ್ಳಿ, ಹೊಸೂರು, ಸೇರಿದಂತೆ ಸುತ್ತಮುತ್ತ ಸಾವಿರಾರು ಮಂದಿ ಭಕ್ತರು ಅಗಮಿಸಿ ದೇವರ ದರ್ಶನ ಪಡೆದು ಬೆಟ್ಟದ ಮೇಲೆ ಅವರೇಕಾಳು ಸಾಂಬಾರು, ರಾಗಿ ಮುದ್ದೆ ಪ್ರಸಾದ ಸವಿದು ತೆರಳಿದರು. ಟ್ರಸ್ಟ್ನ ಅಧ್ಯಕ್ಷರಾದ ಲಿಂಗಪ್ಪ, ಪ್ರಮುಖರಾದ ಹನುಮೇಗೌಡ, ರಾಮಕೃಷ್ಣ, ನಾಗರಾಜು, ನಾಗೇಶ್, ಶಿವರಾಮಯ್ಯ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ