ಕಾಂಗ್ರೆಸ್‌ ಮುಖಂಡರ ಮನೆ ಮೇಲೆ ಇ ಡಿ ದಾಳಿ..!

ನವದೆಹಲಿ

     ಛತ್ತೀಸ್‌ಗಢದ ಕಾಂಗ್ರೆಸ್‌ ನಾಯಕರ ಮನೆ ಹಾಗೂ ಕಚೇರಿಗಳ ಮೇಲೆ ಈಡಿ ಅಧಿಕಾರಿಗಳು  ದಾಳಿ ನಡೆಸಿದ್ದಾರೆ.ಈ ರೈಡ್‌ ನಲ್ಲಿ ಸುಮಾರು 9 ಜನರನ್ನು ಬಂಧಿಸಲಾಗಿದೆ.

      ಈ ಬಗ್ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್  ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದು, ಜಾರಿ ನಿರ್ದೇಶನಾಲಯವು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸಂಬಂಧಿಸಿದ ಆವರಣದಲ್ಲಿ ನಡೆಸಿದ ಶೋಧದ ಬಗ್ಗೆ ಮತ್ತು ಇಂತಹ ಕೃತ್ಯಗಳು ಪಕ್ಷದ ನಾಯಕರ ನೈತಿಕತೆಯನ್ನು ದುರ್ಬಲ ಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
     ಕಲ್ಲಿದ್ದಲು ಲೆವಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಸೇರಿದಂತೆ ಛತ್ತೀಸ್‌ಗಢದ ಹಲವು ಸ್ಥಳಗಳಲ್ಲಿ ಇಡಿ ಸೋಮವಾರ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ರಾಜಧಾನಿ ರಾಯ್‌ಪುರದಲ್ಲಿ ಫೆಬ್ರವರಿ 24 ರಿಂದ ಕಾಂಗ್ರೆಸ್‌ನ ಮೂರು ದಿನಗಳ ಸರ್ವಸದಸ್ಯರ ಅಧಿವೇಶನಕ್ಕೆ ಮುಂಚಿತವಾಗಿ ಈ ದಾಳಿಗಳು ಬಂದಿವೆ.

     ಇಂದು ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿ, ಪಕ್ಷದ ಮಾಜಿ ಉಪಾಧ್ಯಕ್ಷ ಮತ್ತು ಶಾಸಕ ಸೇರಿದಂತೆ ನನ್ನ ಅನೇಕ ಸಹೋದ್ಯೋಗಿಗಳ ನಿವಾಸದ ಮೇಲೆ ಇಡಿ ದಾಳಿ ಮಾಡಿದೆ ಎಂದು ಬಘೇಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ನಾಲ್ಕು ದಿನಗಳ ನಂತರ ರಾಯ್‌ಪುರದಲ್ಲಿ ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನವಿದೆ.

      ಇಂತಹ ಕೃತ್ಯಗಳ ಮೂಲಕ ನಮ್ಮ ಸಹೋದ್ಯೋಗಿಗಳು ಅಧಿವೇಶನದ ತಯಾರಿಯಲ್ಲಿ ತೊಡಗುವುದನ್ನು ನಿಲ್ಲಿಸುವ ಮೂಲಕ ನಮ್ಮ ಉತ್ಸಾಹವನ್ನು ಮುರಿಯಲಾಗುವುದಿಲ್ಲ. ಭಾರತ್ ಜೋಡೋ ಯಾತ್ರೆಯ ಯಶಸ್ಸು ಮತ್ತು ಅದಾನಿ ಸತ್ಯ ಬಯಲಾಗಿರುವುದರಿಂದ ಬಿಜೆಪಿಗೆ ನಿರಾಸೆಯಾಗಿದೆ. ಈ ದಾಳಿ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ದೇಶಕ್ಕೆ ಸತ್ಯ ಗೊತ್ತಿದೆ. ನಾವು ಹೋರಾಡಿ ಗೆಲ್ಲುತ್ತೇವೆ ಎಂದು ಸಿಎಂ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link