ಬೆಂಗಳೂರು
ದಾಸನಪುರ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿನಿಂದ ನಗರದ ಸುತ್ತಮುತ್ತ ಭಾಗದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಇದೀಗ ಯಲಹಂಕ ವಿಧಾನಸಭಾ ಕ್ಷೇತ್ರದ ಚಿರತೆ ಕರುವನ್ನ ತಿಂದು ಹಾಕಿದೆ.

ಬೆಂಗಳೂರು
ದಾಸನಪುರ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿನಿಂದ ನಗರದ ಸುತ್ತಮುತ್ತ ಭಾಗದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಇದೀಗ ಯಲಹಂಕ ವಿಧಾನಸಭಾ ಕ್ಷೇತ್ರದ ಚಿರತೆ ಕರುವನ್ನ ತಿಂದು ಹಾಕಿದೆ.
ಕಳದೆ ಐದು ದಿನಗಳ ಹಿಂದಷ್ಟೇ ದಾಸನಪುರ ಪಕ್ಕದ ರಾಮಾಂಜನೇಯ ಲೇಔಟ್ನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಇದಾದ ನಂತರ ಈಗ ಚಿರತೆ ಕರು ಒಂದನ್ನು ಅರ್ಧ ತಿಂದಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದ್ದು, ಜನರು ಹೊರಗಡೆ ಓಡಾಡಲು ಭಯ ಪಡುತ್ತಿದ್ದಾರೆ. ಸದ್ಯ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿದ್ದು, ಬೋನ್ ಒಳಗೆ ಮೇಕೆ ಮರಿ ಇಟ್ಟು ವ್ಯವಸ್ಥೆ ಮಾಡಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ