ಬೆಂಗಳೂರು
ಧಮ್ಮಿದ್ದರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ. ಜಂಟಿ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ, ಸಚಿವ ಅಶ್ವಥ್ ನಾರಾಯಣ ಹೇಳಿಕೆ ಗುಡುಗಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ.
ಯಾವ ಧರ್ಮವೂ ಕೂಡ ಕೊಲೆ ಮಾಡೋಕೆ ಹೇಳುವುದಿಲ್ಲ, ಯಾವ ಧರ್ಮವೂ ಕೂಡ ಹೊಡೆಯೋಕೆ, ಬಡಿಯೋಕೆ ಹೇಳುವುದಿಲ್ಲ, ಇದು ಬೌದ್ಧಿಕ ದಿವಾಳಿತನ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರು (ಅಶ್ವತ್ ನಾರಾಯಣ) ಆಡು ಭಾಷೆಯಲ್ಲಿ ಹೇಳಿದ್ದಾರೆ. ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ ಎಂದರು. ಅದನ್ನು ಬಿಟ್ಟು ಬಜೆಟ್ ಮೇಲೆ ಚರ್ಚೆ ಮಾಡಬೇಕು ಎಂದರು.
ಜ್ಞಾನೇಂದ್ರ ಹೇಳಿಕೆಗೆ ಮುಗಿಬಿದ್ದ ಕಾಂಗ್ರೆಸ್ ಸದಸ್ಯರು, ಸೈದ್ಧಾಂತಿಕ ದಿವಾಳಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗೃಹ ಸಚಿವರು ದುರ್ಬಲರಾಗಿದ್ದಾರೆ ಎಂದರು. ಮಧ್ಯಪ್ರವೇಶಿಸಿದ ಜಾನೇಂದ್ರ, ನಾನು ಚಾಲೆಂಜ್ ಮಾಡ್ತೇನೆ, ನಿಮಗಿಂತ ಆಡಳಿತ ಚೆನ್ನಾಗಿ ಮಾಡಿದ್ದೇನೆ, ಚರ್ಚೆ ಮಾಡೋಣ ಎಂದರು. ನೀವು ಉತ್ತಮ ಗೃಹ ಮಂತ್ರಿಯಾಗಿದ್ದರೇ ಅಶ್ವತ್ಥ ನಾರಾಯಣ ವಿರುದ್ಧ ಸುಮೊಟೋ ಕೇಸ್ ದಾಖಲಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಧಮ್, ತಾಕತ್ತು ಇದ್ದರೆ ನನ್ನನ್ನು ಹೊಡೆದು ಹಾಕಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿಂದು ಸವಾಲು ಹಾಕಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಸಚಿವ ಅಶ್ವತ್ಥ್ನಾರಾಯಣ ಅವರು ಟಿಪ್ಪು ರೀತಿಯಲ್ಲೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂದು ಹೇಳುತ್ತಾರೆ. ನಾನು ಇಂತಹ ಮಾತಿಗೆಲ್ಲ ಹೆದರಲ್ಲ. ತಾಕತ್ತು, ಧಮ್ ಇದ್ದರೆ ನನ್ನನ್ನು ಹೊಡೆದು ಹಾಕಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯನವರ ಮಾತಿನ ಮಧ್ಯೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ವಿಚಾರದ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಬಜೆಟ್ ಬಗ್ಗೆ ಮಾತನಾಡಿ ಎಂದಾಗ, ಸಿಟ್ಟಾದ ಸಿದ್ದರಾಮಯ್ಯನವರು ನೀವು ಅಸಮರ್ಥ ಗೃಹ ಸಚಿವ. ಇಲಾಖೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ವ್ಯಕ್ತಿಯಾಗಿ ನೀವು ಒಳ್ಳೆಯವರು. ಆದರೆ ಇಲಾಖೆ ನಡೆಸಲು ಅಸಮರ್ಥರು ಎಂದಾಗ, ಸಚಿವ ಆರಗ ಜ್ಞಾನೇಂದ್ರ ಅವರು ನಾನು ನಿಮಗಿಂತ ಚೆನ್ನಾಗಿ ಗೃಹ ಇಲಾಖೆ ನಡೆಸಿದ್ದೇನೆ ಎಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಆಗ ಸಿದ್ದರಾಮಯ್ಯನವರು ನೀವು ಸಮರ್ಥರಿದ್ದರೆ ಸಚಿವ ಅಶ್ವತ್ಥ್ನಾರಾಯಣರವರ ಮೇಲೆ ಕೇಸು ಹಾಕಿ. ಧಮ್ ಇದ್ದರೆ ಸಚಿವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಸವಾಲು ಹಾಕಿದರು.
ನೀವು ಏನೇ ಹೇಳಿದರೂ ನನ್ನ ನಿಲುವಿನಲ್ಲಿ, ಸಿದ್ದಾಂತದಲ್ಲಿ ಬದಲಾವಣೆ ಇಲ್ಲ. ಹೊಡೆದು ಹಾಕಿ, ಸಿದ್ದರಾಮಯ್ಯನ ಮುಗಿಸಿ ಬಿಡಿ ಎಂದು ಹೇಳುವುದು ಆಡು ಭಾಷೆನಾ ಆರಗ ಜ್ಞಾನೇಂದ್ರರವರೇ ಎಂದು ಸಿದ್ದರಾಮಯ್ಯನವರು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಸಿದ್ದರಾಮಯ್ಯನವರ ಮಾತಿಗೆ ಹಲವು ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರು. ಆಗ ಸದನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸಚಿವ ಅಶ್ವತ್ಥ್ನಾರಾಯಣ ಮಾತನಾಡಿದ್ದು ಪ್ರಚೋದನೆ ಅಲ್ಲವೇ, ನಿಮ್ಮ ಇಲಾಖೆ ಸತ್ತು ಹೋಗಿದೆ.
ಪ್ರಚೋದನಾಕಾರಿ ಭಾಷಣ ಮಾಡಿರುವ ಅಶ್ವತ್ಥ್ನಾರಾಯಣರವರ ಮೇಲೆ ಕೇಸು ಹಾಕಬೇಕು. ಆ ಧೈರ್ಯ ನಿಮಗೆ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಭಾವನಾತ್ಮಕ ವಿಚಾರ ಬಿಟ್ಟು ಬಿಡಿ, ಧರ್ಮದ ವಿಚಾರ ಬಿಟ್ಟು ಬಿಡಿ. ಅಬ್ಬಕ್ಕ ವರ್ಸಸ್ ಟಿಪ್ಪು, ಗಾಂಧಿ ವರ್ಸಸ್ ಗೋಡ್ಸೆ ಇದೆಲ್ಲಾ ಬೇಡ. ಇದೆಲ್ಲಾ ಅಪ್ರಸ್ತುತ ಎಂದರು.
ಸಚಿವ ಅಶ್ವತ್ಥ್ನಾರಾಯಣ ಅವರು ಹೊಡಿ, ಬಡಿ ಎಂದು ನೀಡಿರುವ ಹೇಳಿಕೆ ಯಾವ ಸಂಸ್ಕೃತಿ. ಹೊಡಿ ಬಡಿ ಎಂದು ಯಾವ ಧರ್ಮವೂ ಕೂಡಾ ಹೇಳಲ್ಲ. ಇದಕ್ಕೆಲ್ಲ ನಾನು ಜಗ್ಗುವವನಲ್ಲ, ಬಗ್ಗುವವೂ ಇಲ್ಲ. ಈ ರೀತಿ ಮಾತನಾಡಿರುವುದು ಸಚಿವ ಅಶ್ವತ್ಥ್ನಾರಾಯಣನವರ ಬೌದ್ಧಿಕ ದಿವಾಳಿತನ. ಸೋಲುವ ಭಯ, ಹತಾಶೆಯಿಂದ ಅಶ್ವತ್ಥ್ನಾರಾಯಣ ಈ ರೀತಿ ಮಾತನಾಡಿದ್ದಾರೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ