ನವದೆಹಲಿ:
ದೆಹಲಿ ಮುನ್ಸಿಪಲ್ ಚುನಾವಣೆ ಮುಗಿದ 2 ತಿಂಗಳ ನಂತರ ದೆಹಲಿಗೆ ಹೊಸ ಮೇಯರ್ ಆಯ್ಕೆಯಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಇದರಿಂದ ಬಿಜೆಪಿಗೆ ಉಖಭಂಗವಾಗಿದೆ .
ದೆಹಲಿಗೆ 10 ವರ್ಷಗಳ ನಂತರ ಮಹಿಳಾ ಮೇಯರ್ ಸಿಕ್ಕಿದ್ದಾರೆ. ಬಿಜೆಪಿಯ ರಜನಿ ಅಬ್ಬಿ 2011ರಲ್ಲಿ ಕೊನೆಯ ಮಹಿಳಾ ಮೇಯರ್ ಆಗಿದ್ದರು. ಇದರ ನಂತರ, 2012ರಲ್ಲಿ ಶೀಲಾ ದೀಕ್ಷಿತ್ ಸರ್ಕಾರದಲ್ಲಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಅನ್ನು 3 ಭಾಗಗಳಾಗಿ ವಿಂಗಡಿಸಲಾಯಿತು. ಆದರೆ 2022ರಲ್ಲಿ ಈ ಭಾಗಗಳು ಮತ್ತೆ ಒಂದಾಗಿದ್ದು ನಂತರ ನಡೆದ ಮೊದಲ ಚುನಾವಣೆ ಇದಾಗಿದೆ.
