ನವದೆಹಲಿ
ತಜಕೀಸ್ತಾನದ ಗಡಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಚೀನಾದ ಕ್ಸಿನ್ ಜಿಯಾಂಗ್ ಪ್ರದೇಶ ಹಾಗೂ ಪೂರ್ವ ತಜಕೀಸ್ತಾನ ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಚೀನಾದ ಮಾಧ್ಯಮಗಳು ತಿಳಿಸಿವೆ. ವಿರಳ ಜನಸಂಖ್ಯೆ ಇರುವ ಪರ್ವತ ಪ್ರದೇಶದಲ್ಲಿ ಭೂಕಂಪ ಸಂಭವಿಸಿರುವುದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ ಎನ್ನಲಾಗಿದ್ದು, ಇನ್ನಷ್ಟೇ ವರದಿಗಳು ಬರಬೇಕಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 5.37ಕ್ಕೆ ಭೂಕಂಪ ಸಂಭವಿಸಿದ್ದು, 20.5 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಚೀನಾದ ಭೂಕಂಪನ ಜಾಲಗಳ ಕೇಂದ್ರದ ಪ್ರಕಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎನ್ನಲಾಗಿದ್ದು, 10 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಹೇಳಲಾಗಿದೆ. ಆದರೆ, ಯುಎಸ್‌ಜಿಸಿ ಸೇರಿ ಬೇರೆ ಬೇರೆ ಭೂಕಂಪನ ಅಧ್ಯಯನ ಸಂಸ್ಥೆಗಳ ವರದಿ ಪ್ರಕಾರ ಭೂಕಂಪನದ ತೀವ್ರತೆಯಲ್ಲಿ ವ್ಯತ್ಯಾಸ ದಾಖಲಾಗಿದೆ. ಯುಎಸ್‌ಜಿಸಿ ಪ್ರಕಾರ 6.8 ತೀವ್ರತೆಯ ಭೂಕಂಪ ದಾಖಲಾಗಿದೆ.