ನವದೆಹಲಿ:
ಗ್ರೀಸ್ ನಗರದ ಹೆದ್ದಾರಿ ಅಂಡರ್ಪಾಸ್ನಿಂದ ಪ್ರಯಾಣಿಕ ರೈಲು ಹೊರಬರುತ್ತಿದ್ದಾಗ ಟೆಂಪೆ ಪಟ್ಟಣದ ಬಳಿ ಮಂಗಳವಾರ ಮಧ್ಯರಾತ್ರಿಯ ಸಮಯದಲ್ಲಿ ರೈಲುಗಳ ಮಧ್ಯೆ ಅಪಘಾತ ಸಂಭವಿಸಿದ್ದುಇದರ ರಭಸಕ್ಕೆ ಬೆಂಕಿ ರೈಲಿನ ಬೋಗಿಗಳಿಗೆ ಆವರಿಸಿ ಸುಮಾರು 43 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಥೆನ್ಸ್ನಿಂದ ಥೆಸಲೋನಿಕಿ ರೈಲಿನಲ್ಲಿದ್ದ ಅನೇಕ ಪ್ರಯಾಣಿಕರು ದೀರ್ಘ ವಾರಾಂತ್ಯದಲ್ಲಿ ಕಾರ್ನೀವಲ್ ಆಚರಿಸಿದ ನಂತರ ಮನೆಗೆ ಹಿಂದಿರುಗಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ರೈಲಿನಲ್ಲಿದ್ದರು.
“ಇದು ಭೀಕರ ದುರಂತವಾಗಿದ್ದು ಅದನ್ನು ಗ್ರಹಿಸಲು ಕಷ್ಟ” ಎಂದು ಉಪ ಆರೋಗ್ಯ ಸಚಿವ ಮಿನಾ ಗಾಗಾ ಹೇಳಿದ್ದಾರೆ. ಡಿಕ್ಕಿಯ ರಭಸಕ್ಕೆ ಹಲವಾರು ಪ್ರಯಾಣಿಕರು ರೈಲು ಬೋಗಿಗಳ ಕಿಟಕಿಗಳ ಮೂಲಕ ಎಸೆಯಲ್ಪಟ್ಟರು ಎಂದು ಬದುಕುಳಿದವರು ಹೇಳಿದ್ದಾರೆ. ಅಥೆನ್ಸ್ನ ಉತ್ತರಕ್ಕೆ ಸುಮಾರು 380 ಕಿಲೋಮೀಟರ್ ಕಮರಿಯ ಸಮೀಪವಿರುವ ಗದ್ದೆಗೆ ಅಪ್ಪಳಿಸಿದ ಪ್ರಯಾಣಿಕರ ರೈಲು ತಮ್ಮವರಿಗಾಗಿ ಬಿಡಿಸಲು ಹೋಗಿದ್ದಾರೆ.








