ಬೆಂಗಳೂರು :
ನೈತಿಕ ಶಿಕ್ಷಣ ಎಂಬುದು ಯಾವುದೇ ವಿಶ್ವವಿದ್ಯಾನಿಲಯ, ಕಾಲೇಜುಗಳಲ್ಲಿ ಕಲಿಸುವುದಿಲ್ಲ, ಸಂಸ್ಕಾರದಿAದ ಮಾತ್ರ ನೈತಿಕ ಶಿಕ್ಷಣ ಪಡೆಯಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದ್ದಾರೆ.
ಜಯನಗರದ 3ನೇ ಬ್ಲಾಕ್ ನ ವಿಜಯ ಪಿಯು ಕಾಲೇಜು ಹಾಗೂ ಸೌತ್ ಎಂಡ್ ಸರ್ಕಲ್ ಮೆಟ್ರೋ ನಿಲ್ದಾಣದ ಬಳಿಯ ಮೈದಾನದಲ್ಲಿ ಕೆ.ಆರ್. ನಗರದ ಯಡತೊರೆ ಯೋಗನಾಂದೇಶ್ವರ ಸರಸ್ವತಿ ಮಠದ ಪೀಠಾಧೀಶ್ವರರಾದ ಶಂಕರಭಾರತೀ ಸ್ವಾಮೀಜಿಗಳ ಕರಕಮಲ ಸಂಜಾತರಾದ ಬ್ರಹ್ಮಾನಂದಭಾರತೀ ಸ್ವಾಮಿಗಳ ಬೆಂಗಳೂರು ನಗರ ಪುರ ಪ್ರವೇಶ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ತಂದೆ ತಾಯಿಗಳು ನೈತಿಕ ಶಿಕ್ಷಣ ಕಲಿಸಬೇಕು. ಪ್ರತಿಯೊಬ್ಬರೂ ಮನೆಗಳಲ್ಲಿ ಸತ್ಯ, ಸಂಗೀತ, ನೃತ್ಯ, ಸಂಸ್ಕಾರ, ವೇದ, ಶ್ಲೋಕಗಳನ್ನು ಹೇಳಿಕೊಡಬೇಕು. ಇದರಿಂದ ನೈತಿಕತೆಯ ಪ್ರೇರಣೆ ದೊರೆಯಲಿದೆ ಎಂದರು.
ಪ್ರತಿಯೊಬ್ಬರೂ ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಸಂವಿಧಾನದಲ್ಲಿ ಕರ್ತವ್ಯಗಳು ಅತ್ಯಂತ ಮುಖ್ಯ. ಸಂವಿಧಾನದ 54 ಎಫ್ ವಿಧಿಯಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ಹೇಳಿದ್ದು, ಅದರಲ್ಲಿ ನಮ್ಮ ಸಂಸ್ಕೃತಿಯ ಮೌಲ್ಯವನ್ನು ಗೌರವಿಸಬೇಕು ಎಂದು ಹೇಳಿದೆ. ಶ?ರೀಮಂತ ಸಾಂಪ್ರಾಯಿಕ ಹಾಗೂ ಉನ್ನತ ಸಾಂಸ್ಕೃತಿಕ ಮೌಲ್ಯಗಳಿಂದ ಸಾಂಸ್ಕöÈತಿಕ ಮೌಲ್ಯಗಳನ್ನು ಉಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ನಮ್ಮ ದೇಶದ ಬಗ್ಗೆ ಪ್ರೀತಿ ಮಾಡದಿದ್ದರೆ ಇನ್ನೇನು ಸಾಧಿಸಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಶ್ರೀರಾಮ ಕೂಡ ಜನ್ಮಕೊಟ್ಟ ತಾಯಿ, ಜನ್ಮಕೊಟ್ಟ ಭೂಮಿ ಎಲ್ಲದಕ್ಕಿಂತ ಮುಖ್ಯ ಎಂದು ಹೇಳಿದ್ದ. ಸಂವಿಧಾನದ ಕರ್ತವ್ಯಗಳ ಸತ್ ಸಂಪ್ರದಾಯಗಳನ್ನು ಎಲ್ಲರೂ ಎತ್ತಿ ಹಿಡಿಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಇಂದಿನದಲ್ಲ, ಸಿಇಟಿ, ನೀಟ್ ಎಂಬ ವ್ಯವಸ್ಥೆ 1600 ವರ್ಷಗಳಿಗೂ ಮುಂಚೆಯೇ ಇತ್ತು.
ನಳಂದ, ತಕ್ಷಶಿಲೆ ವಿವಿಗಳಲ್ಲಿ ಪ್ರವೇಶ ಪಡೆಯಲು 147 ರಾಷ್ಟçಗಳು ಬರುತ್ತಿದ್ದರು. ಆಗ ಇಂತಹ ವಿದ್ಯಾರ್ಥಿಗಳನ್ನು ದ್ವಾರಪಾಲಕರು ಐದು ಪ್ರಶ್ನೆಗಳನ್ನು ಕೇಳಿ ಶಿಕ್ಷಣ ಪಡೆಯಲು ಅರ್ಹರೋ ಇಲ್ಲವೋ ಎಂಬುದನ್ನು ನಿರ್ಧರಿಸಿ ವಿವಿ ಆವರಣಕ್ಕೆ ಬಿಟ್ಟುಕೊಳ್ಳುತ್ತಿದ್ದರು. ದ್ವಾರಪಾಲಕರೇ ಅಷ್ಟೊಂದು ಜ್ಞಾನವಂತರಾಗಿದ್ದರೆ ಇನ್ನು ಬೋಧಕರು ಹೇಗಿದ್ದರು ಎಂಬುದು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.
ಕೆ.ಆರ್. ನಗರದ ಯಡತೊರೆ ಯೋಗನಾಂದೇಶ್ವರ ಸರಸ್ವತಿ ಮಠದ ಪೀಠಾಧೀಶ್ವರರಾದ ಶಂಕರಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಶಂಕರಭಾರತೀ ಸ್ವಾಮೀಜಿಗಳ ದೇಶ ಪರ್ಯಟನೆ ಸಾಹಸದಿಂದ ಕೂಡಿತ್ತು. ಪಶ್ಚಿಮ ಬಂಗಾಳ, ಬಂಗಾಳ, ನಾಗಲ್ಯಾಂಡ್, ಮಣಿಪುರ ಮತ್ತಿತರೆ ಪ್ರದೇಶಗಳಲ್ಲಿ ಎದುರಿಸಿದ ಸನ್ನಿವೇಶ, ಅಲ್ಲಿ ವ್ಯಕ್ತವಾದ ಸ್ಪಂದನೆ, ಅಲ್ಲಿನ ಹಿಂದೂ ಪರಿಸ್ಥಿತಿ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
ಬ್ರಹ್ಮಾನಂದಭಾರತೀ ಸ್ವಾಮೀಜಿಗಳು ಮಾತನಾಡಿ, ವಿವೇಕದಿಂದಲೇ ಬದುಕನ್ನು ಸರಿಪಡಿಸಿಕೊಂಡು ಮುನ್ನಡೆಬೇಕಾಗುತ್ತದೆ. ಮನುಷ್ಯ ಜನ್ಮ ಅತ್ಯಂತ ದೊಡ್ಡದು. ಇದನ್ನು ನಮ್ಮ ಪುರಾಣ, ಪಣ್ಯಕಥೆಗಳಲ್ಲಿ ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಲಾಗಿದೆ ಎಂದರು.
ಗೋಕುಲ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕುಲಪತಿ ಡಾ.ಎಂ.ಆರ್. ಜಯರಾಮ್ ಮಾತನಾಡಿ, ಗುರು ಎಂದರೆ ಜ್ಞಾನ, ಗುರು ಎಂದರೆ ಬೆಳಕು, ಗುರು ಮುಖೇನವೇ ಧರ್ಮ ಬರುತ್ತದೆ. ಪ್ರಪಂಚ ಬದಲಾವಣೆ ಯಾಗುತ್ತಿದ್ದು, ಮಾನವ, ಪ್ರಕೃತಿ ಸೇರಿದಂತೆ ಪ್ರತಿಯೊಂದು ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪುರ ಪ್ರವೇಶ ಮಾಡಿದ ಬ್ರಹ್ಮಾನಂದಭಾರತೀ ಸ್ವಾಮಿಗಳಂತಹ ಸಂತರು ಧರ್ಮ, ಸತ್ಯ, ಸತ್ಯ ನಿಷ್ಠೆಯನ್ನು ಎತ್ತಿ ಹಿಡಿಯಲು ದೇಶದ ಪ್ರತಿಯೊಂದು ಮೂಲೆಗಳಿಗೆ ತೆರಳಿ ಅರಿವಿನ ಬೆಳಕು ಮೂಡಿಸಬೇಕು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
