ರೆಡ್‌ಕ್ರಾಸ್ ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾಗಿದೆ

ಗುಬ್ಬಿ :

     ರೆಡ್‌ಕ್ರಾಸ್ ನಂತಹ ಸಂಸ್ಥೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಡಿ.ಶಿವನಂಜಯ್ಯ ತಿಳಿಸಿದರು. ಅವರು ಗುರುವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

    ಅಪಘಾತ ಹಾಗೂ ತುರ್ತು ಸಂದರ್ಭಗಳಾದ ಹೃದಯಾಘಾತ, ನಾಯಿ ಕಡಿತ, ಹಾವು ಕಡಿತ, ನೀರಲ್ಲಿ ಮುಳುಗುವಿಕೆ, ಬೆಂಕಿ ಅವಘಡಗಳು ಇತ್ಯಾದಿ ಸಂದÀರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡಲು ರೆಡ್ ಕ್ರಾಸ್ ಸ್ವಯಂಸೇವಕರು ಸಿದ್ದರಿರಬೇಕು. ವಿದ್ಯಾರ್ಥಿಗಳಲ್ಲಿ ಓದಿನ ಜೊತೆಯಲ್ಲಿಯೇ ಸೇವಾ ಮನೋಭಾವನೆಯನ್ನು ಮೂಡಿಸಲು ರೆಡ್‌ಕ್ರಾಸ್‌ನಂತಹ ಸಂಸ್ಥೆಗಳು ಸಹಾಯಕವಾಗುತ್ತವೆ ಎಂದರು.

    ಕಾಲೇಜು ಘಟಕದ ರೆಡ್‌ಕ್ರಾಸ್ ಸಂಚಾಲಕಿ ಡಾ.ಜ್ಯೋತಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಯುದ್ಧಗಳು, ವಿಪತ್ತುಗಳಲ್ಲಿ ಮಾನವೀಯ ನೆರವನ್ನು ನೀಡಲು ಸದಾ ಸಿದ್ದವಿರುವುದು. ಯುವ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಗಾರವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

    ಯುವ ರೆಡ್ ಕ್ರಾಸ್‌ನ ಜಿಲ್ಲಾ ಘಟಕದ ಸಂಚಾಲಕ ಬಿ.ಆರ್ ಉಮೇಶ್ ಮಾತನಾಡಿ, ಪ್ರಥಮ ಚಿಕಿತ್ಸೆಯ ಜ್ಞಾನದ ಪ್ರಾಮುಖ್ಯತೆಯು ವಿದ್ಯಾರ್ಥಿಗಳಿಗೆ ವಿಪತ್ತುಗಳ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದ ಅವರು, ತುರ್ತು ಪರಿಸ್ಥಿತಿಗಳಲ್ಲಿ ಎಲ್ಲಾ ರೀತಿಯ ನೆರವಿಗೆ ವಿದ್ಯಾರ್ಥಿಗಳು ಸಿದ್ಧರಾಗಿರಬೇಕು ಎಂದು ಹೇಳಿದರು.

   ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಶಿವಕುಮಾರ್ ಮಾತನಾಡಿದರು. ತುಮಕೂರು ವಿಶ್ವವಿದ್ಯಾಲಯದ ಸಂಯೋಜಕರಾದ ಡಾ.ಪೂರ್ಣಿಮಾ, ಡಾ.ಅಪರ್ಣಾ ಮತ್ತು ಆನಂದ್ ರವರು ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.

   ಕಾರ್ಯಾಗಾರದಲ್ಲಿ ಬೇರೆ ಬೇರೆ ಕಾಲೇಜಿನ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷಾಂಗ ವಿಭಾಗದ ಸಂಚಾಲಕ ಯು.ಕೆ ಬಾಗೇವಾಡಿ, ಪ್ರಾಧ್ಯಾಪಕರುಗಳಾದ ಡಾ.ಗೋವಿಂದು, ಪ್ರೊ.ಶ್ರೀನಿವಾಸಯ್ಯ, ಪ್ರೊ.ಕಾಳಪ್ಪ, ರೆಡ್‌ಕ್ರಾಸ್‌ನ ಅಂಜಿನಪ್ಪ, ಲಯನ್ಸ್ ಸಂಸ್ಥೆಯ ಸಿದ್ದಪ್ಪ ಗುಜ್ಜರಿ, ಕಮಲನಾಭಾಚಾರಿ, ರಾಜೀವ್ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link