ಬೆಂಗಳೂರು:
40% ಕಮಿಷನ್ ಸರ್ಕಾರವನ್ನು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 40 ಸೀಟಿಗೆ ನಿಲ್ಲಿಸುವುದೇ ಕಾಂಗ್ರೆಸ್ ಗುರಿಯಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ನಿಯಂತ್ರಿಸಲು ಸೂಕ್ತ ಕಾರ್ಯತಂತ್ರ ರೂಪಿಸಲಾಗಿದೆ ಎಂದರು.
ಬಿಜೆಪಿಯವರಿಗೆ ಈಗಾಗಲೇ ಅವರಿಗೆ 60 ಸ್ಥಾನಗಳ ಮೇಲೆ ಬರುವುದಿಲ್ಲ ಎಂದು ಗೊತ್ತಾಗಿದೆ. 40% ಕಮಿಷನ್ ಸರ್ಕಾರವನ್ನು 40 ಸ್ಥಾನಗಳಿಗೆ ಸೀಮಿತಗೊಳಿಸಲು ತಂತ್ರ ಮಾಡಿದ್ದೇವೆ. ಬಿಜೆಪಿಯಿಂದ ಬೇಸತ್ತು ನಮ್ಮ ಪಕ್ಷಕ್ಕೆ ಹಲವು ನಾಯಕರು ಬರುತ್ತಿದ್ದಾರೆ. ಪುಟ್ಟಣ್ಣ ಅಂತಹವರೇ ಕಾಂಗ್ರೆಸ್ ಗೆ ಸೇರಿರುವುದರಿಙದ ಬಂದಿರುವುದರಿAದ ಪರಿಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ ಎಂದರು.
ಲಿಂಗಾಯತ ನಾಯಕರನ್ನ ಬಿಜೆಪಿ ಪಕ್ಷ ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಯಡಿಯೂರಪ್ಪ ಅಂತಹ ನಾಯಕರನ್ನೇ ಮೂಲೆ ಗುಂಪು ಮಾಡಿ,ಮಾರ್ಗದರ್ಶನ ಮಂಡಳಿಯ ಮಾರ್ಗದಲ್ಲಿ ನಿಲ್ಲಿಸಿದ್ದಾರೆ. ವಿ.ಸೋಮಣ್ಣನವರು ಲಿಂಗಾಯತ ನಾಯಕರು ಜೊತೆಗೆ ಬೇರೆ ಸಮುದಾಯಗಳ ಜೊತೆಗೆ ಒಳ್ಳೆ ಸಂಬAಧ ಇದೆ. ಬಿಜೆಪಿಯಿಂದ ಸೋಮಣ್ಣನವರೇ ಬೇಸತ್ತಿರುವುದು ನಿಜ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ನಂಬಿ ಯಾರು ಬೇಕಾದರೂ ಬರಬಹುದು ಬಿಜೆಪಿಗೆ ಮಂಡ್ಯ ಸಂಸದೆ ಸುಮಲತಾ ಸೇರ್ಪಡೆಯಿಂದ ತ್ರಿಕೋನ ಸ್ಪರ್ದೆ ಆಗುತ್ತಾ ನೋಡೋಣ. ಮಂಡ್ಯದ ರಾಜಕೀಯ ಚಿತ್ರಣವೇ ಬೇರೆ, ಅನುಕಂಪದ ಅಲೆ ಮೇಲೆ ಗೆದ್ದಿರುವವರು ಈ ಬಾರಿ ಚುನಾವಣೆಯಲ್ಲಿ ಮಂಡ್ಯ ಜನತೆ ಕಾಂಗ್ರೆಸ್ ಪಕ್ಷ ಗೆಲ್ಲಸಲಿದ್ದಾರೆ.
ನಮಗೆ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಸವಾಲಿಲ್ಲ. ಟಿಕೆಟ್ ಹಂಚಿಕೆ ನಮಗೆ ದೊಡ್ಡ ಜವಾಬ್ದಾರಿ. ಮೂರು ದಿನಗಳ ಕಾಲ ಪರಿಶೀಲನಾ ಸಮಿತಿ ಸಭೆ ಮಾಡಿ ಚರ್ಚಿಸಿದ್ದೇವೆ. ಸಂಪೂರ್ಣ ಮಾಹಿತಿಯನ್ನು ಸಮಿತಿಗೆ ನೀಡಿದ್ದೇವೆ ಎಂದು ಹೇಳಿದರು.
ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಪಟ್ಟಿ ಅಂತಿಮವಾಗಲಿದೆ. ಟಿಕೆಟ್ ಸಂಬAಧ ಯಾವುದೇ ಕಗ್ಗಂಟು ಇಲ್ಲ. ಮೂರು ದಿನಗಳ ಕಾಲ ಅದಕ್ಕಾಗಿಯೇ ಚರ್ಚೆ ನಡೆಸಿದ್ದೇವೆ. ಕೆಲ ತೀರ್ಮಾನವನ್ನ ಕೇಂದ್ರೀಯ ಚುನಾವಣಾ ಸಮಿತಿ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್ ಎಲ್ಲರೂ ಕೇಂದ್ರ ಚುನಾವಣಾ ಸಮಿತಿಯಲ್ಲಿ ಇದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ