ತುರುವೇಕೆರೆ:
ತಾಲೂಕಿನ ದೆಬ್ಬೇಘಟ್ಟ ಹೋಬಳಿಯಲ್ಲಿ ಬಹು ವರ್ಷಗಳಿಂದ ಕಾಡುತ್ತಿರುವ ಜಲಕ್ಷಾಮ ದೆಬ್ಬೇಘಟ್ಟ ಏತನೀರಾವರಿಯ ಮೂಲಕ ಮುಂದಿನ ದಿನಗಳಲ್ಲಿ ನಿವಾರಣೆಯಾಗಲಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ಚಿಕ್ಕ ತುರುವೇಕೆರೆ ಗ್ರಾಮದ ಕರೆತಿಮ್ಮರಾಯಸ್ವಾಮಿ ದೇವಸ್ಥಾನದ ಆವgಣದಲ್ಲಿ ಮಲ್ಲಾಘಟ್ಟಕೆರೆಯ ಹಳ್ಳದಿಂದ ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ತುಂಬಿಸುವ 50 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಯೋಜನೆಯನ್ನು ಮಂಜೂರು ಮಾಡಿಸಲು ಬಹಳ ಶ್ರಮ ಪಟ್ಟಿದ್ದೇನೆ.
ಮೊದಲು ಸುಮಾರು 27 ಕೋಟಿ ವೆಚ್ಚದಲ್ಲಿ ಕೊಳಾಲದ ಕೆರೆಯಿಂದ ಮಾಡುವ ಯೋಜನೆಯಾಗಿತ್ತು, ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹಾಗೂ ಅದಿಕಾರಿಗಳ ಜೊತೆ ಚರ್ಚೆ ನೆಡೆಸಿದಾಗ ಅವರ ಸೂಚನೆಯಂತೆ ಚಿಕ್ಕ ತುರುವೇಕೆರೆಯ ಹಳ್ಳದಿಂದ ನೀರನ್ನು ಏತ ನೀರಾವರಿಯ ಮೂಲಕ ಬಿಗನೇನಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಯ ಕೆರೆಗಳಿಗೆ ನೀರು ಹರಿಸಲು ತೀರ್ಮಾನಿಸಿ ಸುಮಾರು 50 ಕೋಟಿ ರೂ ಅಂದಾಜು ವ್ಯಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಿ ಭೂಮಿ ಪೂಜೆ ಮಾಡಲಾಗಿದೆ.
ಈ ಯೋಜನೆ 540 ಎಚ್ ಪಿ ಸಾಮರ್ಥ್ಯದ ಎರಡು ಜೊತೆಗೆ ಒಂದರಿಂದ ಮೂರು ಪಂಪುಗಳು 520 ಎಮ್ ಎಮ್ ವ್ಯಾಸದ ರೈಸಿಂಗ್ ಮೇನ್ ಪೈಪು ಒಟ್ಟಾರೆ 13.6 ಕಿಲೋ ಮೀಟರ್ ಈ ಕಾಮಗಾರಿಯನ್ನು ಗುತ್ತಿಗೆದಾರರು 18 ,ತಿಂಗಳ ಒಳಗಾಗಿ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ. ಏತ ನೀರಾವರಿಯಿಂದ 29 ಕೆರೆಗಳಿಗೆ ನೀರು ತುಂಬಿಸುವ ಜೊತೆಗೆ ಸಣ್ಣಪುಟ್ಟ ಕಟ್ಟೆಗಳಿಗೂ ನೀರು ಹರಿಯಲಿದೆ.. ಸುಮಾರು 20ರಿಂದ 25 ವರ್ಷಗಳಿಂದ ಬರಡಾಗಿದ್ದ ಈ ಭಾಗದ ರೈತರ ಭೂಮಿ ಸಂಮೃದ್ದವಾಗಲಿದೆ. ಪೈಪ್ ಅಳವಡಿಸಲು ರೈತರ ಜಮೀನುಗಳಿಗೆ ಇಂತಿಷ್ಟೂ ತೊಂದರೆಯಾಗುವುದಿಲ್ಲ. ಮಾಜಿ ಶಾಸಕರು ಈ ಯೋಜನೆಯನ್ನು ನಾನು ಮಾಡಿಸಿದ್ದು ಎಂದು ಹೇಳಿಕೆ ನೀಡಿ ಸರ್ಕಾರಕ್ಕೆ ಪತ್ರ ಬರೆದು ತಮ್ಮ ರಾಜಕೀಯ ದುರುದ್ದೇಶದಿಂದ ಈ ಯೋಜನೆಯನ್ನು ನಿಲ್ಲಿಸಲು ಹುನ್ನಾರ ನೆಡೆಸುತ್ತಿದ್ದಾರೆ ಎಂದರು.
ಬಿಗನೇನಹಳ್ಳಿ ರವಿಕುಮಾರ್ ರವಿಕುಮಾರ್ ಮಾತನಾಡಿ ನಾಲ್ಕೈದು ವರ್ಷಗಳ ಹಿಂದೆ ದೆಬ್ಬೇಘಟ್ಟ ಹೋಬಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಇದೀಗ 50ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆಗೆ ಸರ್ಕಾರದಿಂದ ಅನುಧಾನ ತಮದು ನಮ್ಮ ಬಾಗದ ರೈತಾಪಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಜೊತೆಗೆ 13 ವರ್ಷಗಳಿಂದ ಓಡಾಟಕ್ಕೆ ತೊಮದರೆಯಾಗಿದ್ದ ರಸ್ತೆಗಳನ್ನು ಶಾಸಕರು ಓಡಾಟಕ್ಕೆ ಸುಗಮಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಲಕ್ಷ್ಮಿ ತಾಲೂಕು ಬಿಜೆಪಿ ಅಧ್ಯಕ್ಷ ಮುತ್ತಣ್ಣ, ಮುಖಂಡರಾದ ಕಡೆಹಳ್ಳಿ ಸಿದ್ದೇಗೌಡ. ಕೊಂಡಜ್ಜಿ ವಿಶ್ವನಾಥ್. ದುಂಡ ರೇಣುಕಯ್ಯ. ತಮ್ಮಣ್ಣಗೌಡ, ವಿ.ಬಿ. ಸುರೇಶ್. ವಕೀಲ ಮುದ್ದೇಗೌಡ. ಹೇಮಚಂದ್ರು, ಶಂಕರೇಗೌಡ, ಕೆಂಪೇಗೌಡ, ಸೋಮೇನಹಳ್ಳಿ ಜಗದೀಶ್. ಹೇಮಚಂದ್ರು, ಬಡಗರಹಳ್ಳಿ ರಾಮೇಗೌಡ. ಉಮೇಶಣ್ಣ, ಹಿಂಡುಮಾರನಹಳ್ಳಿ ಕುಮಾರಣ್ಣ, ಭಾನು, ಪ.ಪಂ.ಸದಸ್ಯರಾದ ಚಿದಾನಂದ್, ಅಂಜನ್‌ಕುಮಾರ್ ಸಣ್ಣ ನೀರಾವರಿ ಇಲಾಖೆ ಅಧಿಖಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ