“ಎಲಾರ”ವನ್ನು ಯಾರು ನಿಯಂತ್ರಿಸುತ್ತಾರೆ? : ಕೇಂದ್ರಕ್ಕೆ ರಾಹುಲ್‌ ಪ್ರಶ್ನೆ…!

ನವದೆಹಲಿ:

     ತಮ್ಮ ವಿದೇಶಿ ಪ್ರವಾಸದಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ ನಂತರ ರಾಹುಲ್, ಅದಾನಿ ಸಮೂಹ ಮತ್ತು ಎಲಾರಾಗೆ ಕ್ಷಿಪಣಿ ಮತ್ತು ರಾಡಾರ್ ನವೀಕರಣದ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಭಾರತದ ಕ್ಷಿಪಣಿ ಮತ್ತು ರಾಡಾರ್ ನವೀಕರಣದ ಗುತ್ತಿಗೆಯನ್ನು ಅದಾನಿ ಒಡೆತನದ ಕಂಪನಿ ಮತ್ತು ಎಲಾರಾ ಎಂಬ ಸಂಶಯಾಸ್ಪದ ವಿದೇಶಿ ಸಂಸ್ಥೆಗೆ ನೀಡಲಾಗಿದೆ. ಎಲಾರವನ್ನು ಯಾರು ನಿಯಂತ್ರಿಸುತ್ತಾರೆ?. ಅಜ್ಞಾತ ವಿದೇಶಿ ಸಂಸ್ಥೆಗಳಿಗೆ ಕಾರ್ಯತಂತ್ರದ ರಕ್ಷಣಾ ಸಾಧನಗಳ ನಿಯಂತ್ರಣವನ್ನು ನೀಡುವ ಮೂಲಕ ಭಾರತದ ರಾಷ್ಟ್ರೀಯ ಭದ್ರತೆಯನ್ನು ಏಕೆ ರಾಜಿ ಮಾಡಿಕೊಳ್ಳಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
    ರಾಹುಲ್ ಗಾಂಧಿ ವಿವಾದದ ಕೇಂದ್ರಬಿಂದುವಾಗಿದ್ದರೆ, ಅದಾನಿ ವಿವಾದದ ಕುರಿತಾಗಿ ಪ್ರತಿಪಕ್ಷಗಳು ಒಂದಾಗಿವೆ. ಆದರೆ, ಟಿಎಂಸಿಯು ಕಾಂಗ್ರೆಸ್ ನೇತೃತ್ವದ ಗುಂಪುಗಾರಿಕೆಯಿಂದ ದೂರ ಉಳಿದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿಯವರ ಕ್ಷಮೆಯಾಚನೆಯ ಅಗತ್ಯವನ್ನು ತಳ್ಳಿಹಾಕಿದ್ದಾರೆ. ‘ರಾಹುಲ್ ಗಾಂಧಿ ಅವರು ಯಾವುದೇ ತಪ್ಪು ಹೇಳಿಲ್ಲ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆದರೆ, ಪ್ರಧಾನಿ ವಿದೇಶದಲ್ಲಿ ಅನೇಕ ಸ್ಥಳಗಳಲ್ಲಿ ಮಾತನಾಡಿ ದೇಶವನ್ನು ಅವಮಾನಿಸಿದ್ದಾರೆ’ ಎಂದು ದೂರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link