ಬೆಂಗಳೂರು:
ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ನಿಧನ. ಪ್ರಸಾದ್ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಚವತ್ತಿ ಸಮೀಪದವರಾಗಿದ್ದರು.
ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಸಾದ್ ಹೆಗಡೆ ಇಂದು ಬೆಳಗಿನ ಜಾವ 4:30ಕ್ಕೆ ಕೊನೆಯುಸಿರೆಳೆದಿದ್ದಾರೆ. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಿರಸಿಯ ಸದ್ಗತಿ ನೆಮ್ಮದಿ ಕುಟೀರದಲ್ಲಿ ನೆರವೇರಲಿದೆ.
ಸದ್ಯ ರಾಜ್ ನ್ಯೂಸ್ ನಲ್ಲಿ ಔಟ್ ಪುಟ್ ಚೀಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಲವು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದ ಪ್ರಸಾದ್ ಹೆಗಡೆ, ಮಾಧ್ಯಮ ಲೋಕದಲ್ಲಿ ಅಪಾರ ಅನುಭವ ಹೊಂದಿದ್ದರು.