ಬೆಂಗಳೂರು
ಕೂಲಿ ಮಾಡಿದವರು ಕೂಲಿ ಕೇಳುತ್ತಾರೆ. ಅದು ನ್ಯಾಯ ಹೌದಲ್ಲವೇ? ಹಾಗೆಯೇ ಕೆಲಸ ಮಾಡಿದವರಿಗೆ ಮತ ಕೊಡುವುದು ನ್ಯಾಯ ಅಲ್ಲವೇ? ಮಸಾಲೆ ಜಯರಾಂ ಅವರು ಕೆಲಸ ಮಾಡಿ ಮತ ಕೇಳಲು ಬಂದಿದ್ದಾರೆ. ಮತ ಕೊಟ್ಟು ಅವರ ಕೆಲಸದ ಕೂಲಿ ಕೊಡಿ ಎಂದು ರಾಷ್ಟ್ರೀ ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದ್ದಾರೆ.
ತುರುವೇಕೆರೆಯಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆ ಬೃಹತ್ ರೋಡ್ ಷೋ ಸಂದರ್ಭದಲ್ಲಿ ಮಾತನಾಡಿದ ಅವರು, ಮಸಾಲೆ ನಮ್ಮ ಬಳಿ ರೆಡಿ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕೋಳಿಯನ್ನು ಕತ್ತರಿಸಿ ನಮ್ಮ ಮಸಾಲೆಯನ್ನು ಸೇರಿಸಿ ಎಂದು ವಿನಂತಿಸಿದರು. ಕೆಲವರು ದುಡ್ಡು ಮಾಡಲು ರಾಜಕೀಯಕ್ಕೆ ಬರುತ್ತಾರೆ. ಮಸಾಲೆ ಜಯರಾಂ ಅವರು ತಮ್ಮ ದುಡಿಮೆಯ ಹಣವನ್ನು ಖರ್ಚು ಮಾಡಿ ಜನಸೇವೆ ಮಾಡುತ್ತಿದ್ದಾರೆ. ಗಂಟು ಹೊಡೆದುಕೊಂಡು ಹೋಗುವವರಿಗೆ ಮತ ಕೊಡದಿರಿ ಎಂದು ಮನವಿ ಮಾಡಿದರು.
ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಒಂದು ನಂಟಿದೆ. ಇಲ್ಲಿಗೆ ಹರಿಯುವ ಹೇಮಾವತಿ ತಾಯಿ ಉಗಮವಾಗುವುದು ನನ್ನ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಎಂದು ತಿಳಿಸಿದರು. ನಾವು ಅಲ್ಲಿಂದ ನೀರು ಕೊಡುತ್ತೇವೆ. ಕೆರೆ ತುಂಬಿಸಿ ಈ ಭಾಗದ ಜನರ ಬದುಕು ಹಸನು ಮಾಡಿದ್ದು ಬಿಜೆಪಿ ಸರಕಾರ; ಯಡಿಯೂರಪ್ಪನವರು ಮತ್ತು ಮಸಾಲೆ ಜಯರಾಂ ಅವರು. ಅದಕ್ಕಾಗಿ ಬಿಜೆಪಿ ಬೆಂಬಲಿಸಿ; ಬಿಜೆಪಿಯ ಕಮಲವನ್ನು ಅರಳಿಸಿ ಎಂದು ವಿನಂತಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಸಚಿವ ಮಾಧುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಂಸದ ಬಸವರಾಜ್, ಶಾಸಕ ಮಸಾಲಾ ಜಯರಾಂ, ಯಾತ್ರೆ ಸಂಚಾಲಕ ಸಚ್ಚಿದಾನಂದ ಮೂರ್ತಿ ಮತ್ತಿತರರು ಸಹಸ್ರಾರು ಜನರು, ಕಾರ್ಯಕರ್ತರ ಜೊತೆ ರೋಡ್ ಷೋದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ