ನವದೆಹಲಿ:
ಬಿಜೆಪಿ ಸರ್ಕಾರ ತನ್ನ ವಿರುದ್ದ ಯಾವುದೇ ಪಕ್ಷ ಅಥವಾ ವ್ಯಕ್ತಿ ತಿರುಗಿ ಬಿದ್ದಿದ್ದಾರೆ ಎಂದೆನಿಸಿದರೆ ಅವರನ್ನು ಹೇಗೆಲ್ಲಾ ಹೆದರಿಸಿ ಬೆದರಿಸಿ ಅವರ ಧ್ವನಿಯಡಗಿಸಬಹುವುದು ಅವರ ವಿರುದ್ದ ಸರ್ಕಾರಿ ಸಂಸ್ಥೆ ಅಥವಾ ನ್ಯಾಯಲವನ್ನು ಬಳಸಿಕೊಳ್ಳುತ್ತಿದೆ .
ಇನ್ನೂ ಇದಕ್ಕೆ ಸಾಕ್ಷಿ ಏನು ಎಂದರೆ ಆರ್ ಜೆಡಿ ನಾಯಕರಾದ ತೇಜಸ್ವಿ ಯಾದವ್ ಮತ್ತು ಮಿಸಾ ಭಾರತಿ ಅವರನ್ನು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿರುವ ಬಗ್ಗೆ ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ವಿಪಕ್ಷಗಳು ಮತ್ತು ಪ್ರಜಾಪ್ರಭುತ್ವವನ್ನು ಮುಗಿಸಲು ಆಡಳಿತಾರೂಢ ಪಕ್ಷ ಬಯಸಿದೆ ಎಂದು ಕಿಡಿಕಾರಿದ್ದಾರೆ.
ಭೂಮಿ ಬದಲಿಗೆ ರೈಲ್ವೆಯಲ್ಲಿ-ಉದ್ಯೋಗಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿದೆ. ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡಾ ಸಿಬಿಐ ವಿಚಾರಣೆಗೆ ಹಾಜರಾದರು.
ಬಿಜೆಪಿ ಈ ದೇಶದಿಂದ ವಿರೋಧ ಪಕ್ಷಗಳು ಮತ್ತು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಯಸುತ್ತದೆ. ಅದಕ್ಕಾಗಿಯೇ ಅದು ನಿರಂತರವಾಗಿ ವಿಪಕ್ಷಗಳ ಧ್ವನಿಯ ಮೇಲೆ ದಾಳಿ ಮಾಡುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಯಾದವ್ ಮತ್ತು ಭಾರ್ತಿ ಅವರಿಗೆ ಏಜೆನ್ಸಿಗಳು ಕಿರುಕುಳ ನೀಡುತ್ತಿವೆ. ನಾವೆಲ್ಲರೂ ಪ್ರಜಾಪ್ರಭುತ್ವದ ಮೇಲಿನ ದಾಳಿ ವಿರುದ್ಧ ಒಗಟ್ಟಾಗಿ ಹೋರಾಡಬೇಕಿದೆ ಎಂದಿದ್ದಾರೆ.