ಬೆಂಗಳೂರು:
ಗಾಂಧಿ ಕುಟುಂಬಕ್ಕೆ ದೇಶದಲ್ಲಿ ಕಾನೂನು ವಿಭಿನ್ನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಜನರು ನಂಬಿದಂತಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ ಜನತಾ ಯುವ ಮೋರ್ಚಾ ವತಿಯಿಂದ ಯುವ ಸಂವಾದದ ಅಂಗವಾಗಿ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಥಮ ಬಾರಿ ಮತ ಚಲಾಯಿಸುತ್ತಿರುವ ಯುವ ಜನತೆಯೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.
ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುವುದು ರಾಜಕೀಯ ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಕೇಳಿದ ವಿದ್ಯಾರ್ಥಿಗೆ ಪ್ರತಿಕ್ರಿಯಿಸಿದ ಅವರು, ಗಾಂಧಿ ಕುಟುಂಬವು ತಮಗೆ ಪ್ರತ್ಯೇಕ ಕಾನೂನಿದೆ ಎಂದು ನಂಬುತ್ತದೆ ಎಂದು ಹೇಳಿದರು.
ಸರ್ಕಾರ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿಲ್ಲ. ಕೋರ್ಟ್ ತೀರ್ಪನ್ನು ಆಧರಿಸಿ ಸಭಾಪತಿಗಳು ಈ ನಿರ್ಣಯ ಕೈಗೊಂಡಿದ್ದಾರೆ. ಹಿಂದುಳಿದ ವರ್ಗವನ್ನು ದೂಷಿಸಿದ ಕಾರಣಕ್ಕಾಗಿ ಕೋರ್ಟ್ ನಿಂದ ಈ ತೀರ್ಪು ಬಂದಿದೆ. ರಾಹುಲ್ ಕೇವಲ ಒಬ್ಬ ವ್ಯಕ್ತಿಯನ್ನು ಟೀಕಿಸಿಲ್ಲ, ಬದಲಾಗಿ ಒಂದಿಡೀ ಸಮುದಾಯವನ್ನು ಹೀಗಳೆದಿದ್ದಾರೆ. ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅದರನ್ವಯವಾಗಿ ಸಭಾಪತಿಗಳು ಸಂವಿಧಾನಬದ್ಧವಾಗಿ ಕ್ರಮ ವಹಿಸಿದ್ದಾರೆ ಎಂದರು. ಗಾಂಧಿ ಅವರು ಕಾನೂನಿಗಿಂತ ಮೇಲಿನವರು ಎಂದು ಭಾವಿಸುತ್ತಾರೆ ಮತ್ತು ನ್ಯಾಯಾಲಯವು ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದ್ದಾರೆ ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ