ಬೆಂಗಳೂರು
ರಾಜ್ಯ ಚುನಾವಣಾ ಆಯೋಗ ಚುನಾವಣೆಗೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದ ದಿನದಿಂದಲೇ ಶಾಂತಿಯುತ ಮತ್ತು ಪಾರದರ್ಶಕವಾದ ಚುನಾವಣೆಗಾಗಿ ಹರ ಸಾಹಸ ಪಡುತ್ತಿದೆ .ಈ ಗುರಿ ಸಾಧನೆಗಾಗಿ ಚುನಾವಣಾ ನೀತಿ ಸಂಹಿತೆ ಎಂಬ ಬ್ರಹ್ಮಾಸ್ತ್ರವನ್ನು ಹೂಡಿದ್ದು ಅದು ತನ್ನ ಕೆಲಸವನ್ನು ಶುರು ಮಾಡಿದೆ.
ಇದರ ವ್ಯಾಪ್ತಿ ಏನು ಎಂದು ನೋಡಿದರೆ ಇದು ಸಮುದ್ರದಲ್ಲಿನ ಆಕ್ಟೋಪಸ್ ರೀತಿ ಎಲ್ಲಾ ದಿಕ್ಕಿನಿಂದಲೂ ಕೆಲಸ ಮಾಡುತ್ತಿರುತ್ತದೆ ಅಂದರೆ ಚುನಾವಣಾ ಆಮಿಷ , ಅಕ್ರಮ , ವೆಚ್ಚದ ಮೇಲಿನ ಹದ್ದಿನ ಕಣ್ಣು ಮುಂತಾದ ಆಯಾಮಗಳು ಇದಕ್ಕಿವೆ ,ಇನ್ನು ಸುಲಭವಾಗಿ ಹೇಳ ಬೇಕೆಂದರೆ ಯಾರಾದರು ಚುನಾವಣೆ ಪ್ರಚಾರದ ಸಮಯದಲ್ಲಿ ಹಂಚಲು ತರುವ ಸೀರೆ , ಹಣ ,ಹೆಂಡ ಇನ್ನೂ ಮುಂತಾದ ಆಮಿಷಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಪಯುಕ್ತವಾಗಿದೆ.
ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾಧಿಕಾರಿಗಳು ಕರ ಪತ್ರ, ಬ್ಯಾನರ್, ಪೋಸ್ಟರ್ ಮುದ್ರಿಸುವ ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.