ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ವರ್ಷಾಚರಣೆ : ಮೋದಿಯಿಂದ ಅಂಚೆ ಚೀಟಿ ಬಿಡುಗಡೆ

ಬಂಡೀಪುರ:

          ಪ್ರಧಾನಿ ಮೋದಿಯವರು ಬಂಡೀಪುರ ಕ್ಯಾಂಪ್ ನಿಂದ ಬೋಳಗುಡ್ಡ ಆ್ಯಂಟಿ ಪೋಚಿಂಗ್ ಕ್ಯಾಂಪ್ ನತ್ತ ತೆರಳಿದ್ದು , ಬೋಳಗುಡ್ಡದಿಂದ ಅರಣ್ಯ ವೀಕ್ಷಿಸಲಿದ್ದಾರೆ. ನಂತರ ಮಧುಮಲೈ ಆನೆ ಬಿಡಾರಕ್ಕೆ ಭೇಟಿ ನೀಡಲಿದ್ದಾರೆ.ಇದಕ್ಕೂ ಮುನ್ನ ಇಂದು ಬೆಳಗ್ಗೆ ಪ್ರಧಾನಿ ಮೋದಿಯವರು ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ವರ್ಷಾಚರಣೆ ಅಂಗವಾಗಿ ಅಂಚೆಚೀಟಿ ಬಿಡುಗಡೆ ಮಾಡಿದರು.

     ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಮೋದಿಯವರು ಇಂದು ಬೆಳಗ್ಗೆ ಬಂಡೀಪುರ ಅಭಯಾರಣ್ಯದಲ್ಲಿ ಸುಮಾರು 2 ಗಂಟೆಗಳ ಕಾಲ ಹುಲಿ ಸಫಾರಿಯಲ್ಲಿ ಭಾಗವಹಿಸಿ 20 ಕಿಲೋ ಮೀಟರ್ ಸಾಗಿದರು. ಹುಲಿ ವೀಕ್ಷಣೆಯನ್ನು ಮಾಡಿದರು.

      ಸಫಾರಿಗೆ ಸೂಕ್ತವಾಗುವ ವಿಶೇಷ ಉಡುಪಿನಲ್ಲಿ ಪ್ರಧಾನಿ ಮೋದಿ ಪಯಣ ಮಾಡಿದ್ದು ಅದರ ಫೋಟೋ, ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೂ ಮಿನ್ನ ಮೇಲುಕಾಮನಹಳ್ಳಿ ಹೆಲಿಪ್ಯಾಡ್ ಗೆ ಆಗಮಿಸಿದರು. ಬಂಡೀಪುರಕ್ಕೆ ಪ್ರಧಾನಿಯೊಬ್ಬರು ಬರುತ್ತಿರುವುದು ಇದೇ ಮೊದಲಾಗಿದ್ದು ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ಸಂಭ್ರಮದಲ್ಲಿ ವಿಶೇಷವಾಗಿದೆ.

     ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ಸಂಭ್ರಮದಲ್ಲಿ ಭಾಗಿ: ಮೈಸೂರು, ಚಾಮರಾಜನಗರಗಳಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ. ಇಂದು ಬೆಳಗ್ಗೆ 9.40ರವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಇರಲಿದ್ದು, ಪ್ರಧಾನಿಯವರ ಸಫಾರಿ ವಿಶೇಷವಾಗಿದೆ. 

     ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆ ಸಮಯ. ಹೀಗಾಗಿ ಜನಪ್ರತಿನಿಧಿಗಳು ಸಫಾರಿಯಲ್ಲಿ ಭಾಗವಹಿಸುವಂತಿಲ್ಲ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ತೆರಳುವ ವಾಹನ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. 

    ಬಂಡೀಪುರ, ಮಧುಮಲೈ ಕಾಡಿಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿಯವರು ಮೈಸೂರಿಗೆ ತೆರಳಲಿದ್ದಾರೆ. ಅಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದೇಶಗಳ ಆಹ್ವಾನಿತರು, ನಮ್ಮ ದೇಶದ ಅರಣ್ಯಾಧಿಕಾರಿಗಳು, ಅರಣ್ಯ ಮತ್ತು ಹುಲಿ ಸಂರಕ್ಷಣೆಯಲ್ಲಿ ತೊಡಗಿರುವವರು ಪಾಲ್ಗೊಳ್ಳಲಿದ್ದು ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link