ಬಾರಾಮುಲ್ಲಾ
ಕಣಿವೆ ರಾಜ್ಯದಲ್ಲಿ ಪೋಲೀಸರು ಮತ್ತು ಭಾರತೀಯ ಸೇನೆಯು ಮಂಗಳವಾರ ನಸುಕಿನ ಜಾವ ಬಾರಾಮುಲ್ಲಾದಲ್ಲಿ ಉಗ್ರರ ಘಟಕ ನೆಲೆಯೊಂದನ್ನು ಕಾರ್ಯಾಚರಣೆಯಲ್ಲಿ ನಾಶಪಡಿಸಿದ್ದಾರೆ.
ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಇಬ್ಬರು ಭಯೋತ್ಪಾದಕ ಸಹಚರರಾದ ಫಾರೂಕ್ ಅಹ್ಮದ್ ಪರ್ರಾ ಮತ್ತು ಸೈಮಾ ಬಶೀರ್ ನನ್ನು ಬಂಧಿಸಿರುವ ಪೊಲೀಸರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ