ಉತ್ತರ ಕೊರಿಯಾಗೆ ಖಡಕ್‌ ಎಚ್ಚರಿಕೆ ನೀಡಿದ ಜಪಾನ್‌…!

ನವದೆಹಲಿ 

    ಜಗತ್ತಿನ ಸರ್ವಾಧಿಕಾರಿ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ತಾನ ಪಡೆದಿರುವ ಉತ್ತರ ಕೊರಿಯಾ ಸರ್ವಾಧಿಕಾರಿಗೆ ಪಟ್ಟ ತಂತ್ರಜ್ಞಾನ ದೈತ್ಯ ಜಪಾನ್ ವಾರ್ನಿಂಗ್‌ ನೀಡಿದೆ . ಅದರಲ್ಲೂಉತ್ತರ ಕೊರಿಯಾ ಪ್ರಯೋಗಿಸಿದ್ದ ಪರಮಾಣು ಕ್ಷಿಪಣಿಯ  ಅವಶೇಷಗಳು ಜಪಾನ್‌ ನ ಕೆಲ ಪ್ರದೇಶದ ಮೇಲೆ  ಬೀಳುವ ಸಾಧ್ಯತೆ ಇತ್ತು.

  ನೀವು  ಸುಖಾಸುಮ್ಮನೆ ನಮ್ಮ ಪ್ರಜೆಗಳ ನೆಮ್ಮದಿ ಕೆಡಿಸಿದರೆ ಗ್ರಹಚಾರ ನೆಟ್ಟಗಿರುಚುದಿಲ್ಲಾ ಎಂದು  ಉತ್ತರ ಕೊರಿಯಾಕ್ಕೆ ಎಚ್ಚರಿಕೆ ರವಾನಿಸಿದೆಯಲ್ಲದೆ ತನ್ನ ಸೈನಿಕರಿಗೆ ಸರ್ವ ಸನ್ನದ್ಧವಾಗಿರಿ ಎಂದು ತನ್ನ ಮಿಲಿಟರಿಗೆ ಆದೇಶ ನೀಡಿದೆ.

    ಈ ಮೂಲಕ ಸರ್ವಾಧಿಕಾರಿಗೆ ಸರಿಯಾಗಿ ಪಾಠ ಕಲಿಸೋಣ ಎಂದು ಜಪಾನ್ ಗುಡುಗಿದೆ. ಇದಕ್ಕಾಗಿ ತಮ್ಮ ಕ್ಷಿಪಣಿಗಳು ಮತ್ತು ನೌಕಾಪಡೆಯನ್ನ ಸಿದ್ಧವಾಗಿ ಇರುವಂತೆ ಜಪಾನ್ ರಕ್ಷಣಾ ಸಚಿವ ಯಸುಕಝು ಹಮದಾ ಆದೇಶ ನೀಡಿದ್ದಾರೆ.

      ಉತ್ತರ ಕೊರಿಯಾ ಸರ್ವಾಧಿಕಾರಿ ಈಗ ಅಕ್ಷರಶಃ ರೊಚ್ಚಿಗೆದ್ದಿದ್ದಾನೆ. ತನ್ನ ಶತ್ರುಗಳ ಸರ್ವನಾಶಕ್ಕೆ ಸಿದ್ಧನಾಗಿದ್ದಾನೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಆಟಕ್ಕೆ ಬೆಂಕಿ ಹಚ್ಚಲು ಕಿಮ್ ಜಾಂಗ್ ಉನ್ ಕರೆ ನೀಡಿದ್ದು, ಉತ್ತರ ಕೊರಿಯಾ ತನ್ನ ಮೊಟ್ಟ ಮೊದಲ ಗುಪ್ತಚರ ಉಪಗ್ರಹ ಉಡಾವಣೆ ಮಾಡಲು ತಯಾರಿ ನಡೆಸಿದೆ. ಈ ಕುರಿತು ಖುದ್ದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೆಲದಿನದ ಹಿಂದೆ ಮಾಹಿತಿ ನೀಡಿದ್ದ. ನಮ್ಮ ದೇಶ ಮೊಟ್ಟಮೊದಲ ಗುಪ್ತಚರ ಉಪಗ್ರಹ ಸಿದ್ಧಪಡಿಸಿದೆ. ಕೆಲವೇ ದಿನಗಳಲ್ಲಿ ಅದನ್ನು ಉಡಾಯಿಸಲಾಗುವುದು ಎಂದಿದ್ದ. ಇದೇ ಕಾರಣಕ್ಕೆ ಜಪಾನ್ ಸಿಟ್ಟಾಗಿದೆ.

     ಸರ್ವಾಧಿಕಾರಿ ಕಿಮ್ ಸುಲಭವಾಗಿ ಪತ್ತೆ ಮಾಡಲು ಆಗದ ಮತ್ತು ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ ಕೆಲ ದಿನದಲ್ಲಿ ಗುಪ್ತಚರ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದ್ದಾನೆ. ಘನ-ಇಂಧನ ಬಳಸಿಕೊಂಡು ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ  ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿದೆ. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸುತ್ತಿದ್ದಾನೆ ಕಿಮ್.

     ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಅದೇ ಕಿತಾಪತಿ ಮಾಡುತ್ತಿದೆ. ಪದೇಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೊತ್ತಲ್ಲೇ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಇದೇ ತಂತ್ರ ಅನುಸರಿಸುತ್ತಿರುವುದು ಚೀನಾ ಗಮನಕ್ಕೆ ಬಂದಿದೆ. ಹೀಗಾಗಿ ನಮ್ಮ ಜೊತೆ ಮತ್ತಷ್ಟು ಹತ್ತಿರವಾಗಿ, ಶತ್ರುಗಳನ್ನು ಸದೆಬಡಿಯೋಣ ಎಂಬ ಸಂದೇಶ ಚೀನಾ ನೆಲದಿಂದ ಉತ್ತರ ಕೊರಿಯಾಗೆ ತಲುಪಿದೆ. ಇದೀಗ ಉತ್ತರ ಕೊರಿಯಾ ಗುಪ್ತಚರ ಉಪಗ್ರಹ ಉಡಾವಣೆ ಮಾಡುತ್ತಿರುವುದರ ಹಿಂದೆ ಚೀನಾ ಅಥವಾ ರಷ್ಯಾ ಸಹಾಯ ಕೂಡ ಇರುವ ಆರೋಪವಿದೆ.

     ಹೊಸ ಉಪಗ್ರಹ ಉಡಾವಣೆಗೆ ಸಜ್ಜಾಗಿರುವ ಕಿಮ್, ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಅದೆಷ್ಟು ಗರಂ ಆಗಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದ್ದಾನೆ. ಈ ಮೂಲಕ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ ಎಂದು ಉತ್ತರಿಸುತ್ತಿದ್ದಾನೆ. ಇದಕ್ಕೂ ಬಗ್ಗದ ಶತ್ರುಪಡೆಗೆ ಕಿಮ್ ಗುಪ್ತಚರ ಉಪಗ್ರಹದ ಶಾಕ್ ಟ್ರೀಟ್‌ಮೆಂಟ್ ಕೊಡಲು ಮುಂದಾಗಿರುವುದು ವಿಶೇಷ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link