ಬೆಂಗಳೂರು:
ಬಿಜೆಪಿಯ ದುರಾಡಳಿತವೇ ಕಾಂಗ್ರೆಸ್ ಪಕ್ಷಕ್ಕೆ 140 ಸ್ಥಾನ ಸಿಗುವಂತೆ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.
ಈಜಿಪುರ ವಾರ್ಡ್‌ನಿಂದ ಗುರುವಾರ ಕಾಂಗ್ರೆಸ್ ವರಿಷ್ಠ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಚಾರಕ್ಕೆ ಚಾಲನೆ ನೀಡಿದರು. ನಂತರ, ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಲು ದ್ವಿಚಕ್ರ ವಾಹನದಲ್ಲಿ ತೆರಳಿದರು.
ಈ ವೇಳೆ ಕಾರ್ಯಕರ್ತರು ರಾಮಲಿಂಗಾ ರೆಡ್ಡಿಯವರನ್ನು ಹೂಮಾಲೆ ಹಾಕುವ ಮೂಲಕ ಸ್ವಾಗತಿಸಿದರು, ಬಳಿಕ ರಾಮಲಿಂಗಾ ರೆಡ್ಡಿಯವರು, ಇಂದಿರಾ ಕಾಲೋನಿ, ರಾಜೇಂದ್ರ ನಗರ ಮತ್ತು ಅಂಬೇಡ್ಕರ್ ನಗರ ನಿವಾಸಿಗಳನ್ನು ಭೇಟಿಯಾದರು. ಇದೇ ವೇಳೆ ಕೆಲ ಮತದಾರರ ಮನೆಗಳಿಗೂ ಭೇಟಿ ನೀಡಿದರು.
ಅಧಿಕಾರಕ್ಕೆ ಬಂದಿದ್ದೇ ಆದರೆ, ಜನತೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ, ತಲಾ 10 ಕೆಜಿ ಅಕ್ಕಿ, ಗೃಹಿಣಿಯರಿಗೆ 2,000 ರೂ ಸಹಾಯ ಮತ್ತು ಪದವೀಧರರಿಗೆ ಸಹಾಯ ಮಾಡುತ್ತೇವೆ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ