ನವದೆಹಲಿ:
ರಷ್ಯಾ & ಉಕ್ರೇನ್ ಮಧ್ಯೆ ಭೀಕರ ಕಾಳಗ ಆರಂಭವಾಗಿದೆ. ತನ್ನ ಮೇಲೆ ರಷ್ಯಾ ಹಾರಿಸುತ್ತಿರುವ ಡ್ರೋನ್ & ಮಿಸೈಲ್ ಉಕ್ರೇನ್ ಸೇನೆ ಹೊಡೆದು ಹೊಡೆದು ಮಲಗಿಸುತ್ತಿದೆ. ಅಮೆರಿಕದ ಸಹಾಯದಿಂದ ಇದೀಗ ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ತಿರುಗಿಬಿದ್ದಿದೆ. ಹಾಗಾದರೆ ಇದರ ಪರಿಣಾಮ ಮುಂದೆ ಏನಾಗಬಹುದು? ಇಲ್ಲಿ ತಿಳಿಯೋಣ.
ರಷ್ಯಾ ಮಿಲಿಟರಿ ಉಕ್ರೇನ್‌ನ ನಗರಗಳನ್ನೇ ಗುರಿಯಾಗಿಸಿ ರಾತ್ರಿ ಸಮಯದಲ್ಲಿ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿ ಶುರು ಮಾಡಿದೆ. ಈ ಅಟ್ಯಾಕ್ ನಂತರ ಉಕ್ರೇನ್‌ನ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಈ ಬೆಳವಣಿಗೆ ಮಧ್ಯೆ ತಕ್ಷಣ ಎಚ್ಚೆತ್ತ ಉಕ್ರೇನ್ ಸೇನೆ ರಷ್ಯಾ ಹಾರಿಸಿದ್ದ ಸುಮಾರು 35 ಡ್ರೋನ್ ಹೊಡೆದು ಹಾಕಿದೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಐವರು ನಾಗರಿಕರು ಗಾಯಗೊಂಡಿದ್ದು, ಪರಿಸ್ಥಿತಿ ನಿಭಾಯಿಸಲು ಗಡಿಯಲ್ಲಿ ಹೈಅಲರ್ಟ್ ಕೂಡ ಘೋಷಿಸಿದೆ ಉಕ್ರೇನ್ ಸೇನೆ.
ಯುದ್ಧ ಟ್ಯಾಂಕ್, ಡ್ರೋನ್ ಸೇರಿದಂತೆ ಯುದ್ಧ ವಿಮಾನಗಳನ್ನ ಬಳಸಿ ದಾಳಿ ಮಾಡಿದೆಯಂತೆ ರಷ್ಯಾ ಸೇನೆ. ರಾಕೆಟ್ ಲಾಂಚರ್, ಕ್ಷಿಪಣಿ, ಬಾಂಬ್‌ಗಳನ್ನೂ ಉಕ್ರೇನ್ ಮೇಲೆ ಎಸೆದಿರುವ ಆರೋಪ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ ನಾಲ್ವರು ಅಮಾಯಕರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ