ತುಮಕೂರು :
ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಉತ್ಸಾಹದ ಮತದಾನ ನಡೆಯುತ್ತಿರುವುದು ಸರಿಯಷ್ಟೇ. ಆದರೆ ಬಹುತೇಕ ಮತಗಟ್ಟೆ ಗಳಲ್ಲಿ ಸಾಲುಗಟ್ಟಿ ನಿಂತಿರುವ ಮತದಾರರು ಮತದಾನ ಪ್ರಕ್ರಿಯೆ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇವಿಎಂಗಳಲ್ಲಿ ಮತದಾನ ಪ್ರಕ್ರಿಯೆಗೆ ಒಬ್ಬ ರಿಗೆ ಎರಡು -ಮೂರು ನಿಮಿಷ ತೆಗೆದು ಕೊಳ್ಳುತ್ತಿದ್ದು, ಕೊಠಡಿ ಹೊರಗಡೆ ನಿಂತವರು ಹಲವು ಸಮಯ ಕಾಯುತ್ತಾ ನಿಲ್ಲು ವಂತಾಗಿದೆ.ಸಾವಿರಕ್ಕೂ ಅಧಿಕ ಮತದಾರರಿರುವ ಮತಗಟ್ಟೆ ಗಳಿಗೂ ಒಂದೇ ಇವಿಎಂ ವಿವಿ ಪ್ಯಾಟ್ ಯಂತ್ರ ಪೂರೈಸಿರುವುದು ಸಮಸ್ಯೆ ಗೆ ಮೂಲ ಕಾರಣವಾಗಿದ್ದು ಮತಗಟ್ಟೆ ಅಧಿಕಾರಿಗಳನ್ನು ಜನ ದೂಷಿಸುತ್ತಿದ್ದಾರೆ. ಮತಗಟ್ಟೆ ಅಧಿಕಾರಿಗಳನ್ನು ಕೇಳಿದರೆ ಅಸಹಾಕರಾಗಿ ಉತ್ತರ ನೀಡುತ್ತಿದ್ದು, ಮೇಲಿನವರ ಒದಗಿಸಿರುವ ಸೌಲಭ್ಯ ದ ಮಿತಿಯಲ್ಲಿ ನಾವು ಮತದಾನ ಪ್ರಕ್ರಿಯೆ ಪೂರ್ಣ ಗೊಳಿಸಬೇಕಿದೆ.
ಹಿರಿಯ ನಾಗರಿಕರು, ವಿಶೇಷ ಚೇತನರು ಮತದಾನ ಮಾಡುವಲ್ಲಿ ದಾಖಲೆ ಪರಿಶೀಲನೆ, ಸಹಿ ಹಾಕುವಾಗ ವಿಳಂಬವಾಗುತ್ತಿದ್ದು, ನಿಗದಿತ ಆರು ಗಂಟೆ ಯೊಳಗೆ ಮತದಾನ ಕೇಂದ್ರ ಕ್ಕೆ ಬಂದ ಯಾರಿಗೂ ಮತದಾನ ನಿರಾಕರಿಸುವುದಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಸಿರಿವರ ಬ್ಲಾಕ್ ಎರಡರಲ್ಲಿ ಮತಯಂತ್ರ ದೋಷದಿಂದ ಒಂದು ತಾಸು ವಿಳಂಬ ವಾಗಿ ಮತದಾನ ಆರಂಭವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ