ಹೊಸದಿಲ್ಲಿ:
ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಯನ್ನು ಸಂಘ-ಸಂಯೋಜಿತ ವಿಶ್ವ ಹಿಂದೂ ಪರಿಷತ್‌ನ ಯುವ ಘಟಕವಾದ ಬಜರಂಗದಳದೊಂದಿಗೆ ಸಮೀಕರಿಸಿದ ಕಾರಣದಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ದಾಖಲಾಗಿರುವ 100 ಕೋಟಿ ರೂ ಮೊತ್ತದ ಮಾನಹಾನಿ ಪ್ರಕರಣದಲ್ಲಿ ಪಂಜಾಬ್ ನ್ಯಾಯಾಲಯವು ಇಂದು ಸಮನ್ಸ್ ಜಾರಿ ಮಾಡಿದೆ .
ಇನ್ನು ಕಾರಣ ನೋಡುವುದಾದರೆ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳಿರುವುದನ್ನು ಉಲ್ಲೇಖಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ .
ಅದರ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ. “ಬಜರಂಗದಳ ಹಿಂದೂಸ್ತಾನ್” ಎಂಬ ಸಂಘಟನೆಯ ಅಧ್ಯಕ್ಷ ಹಿತೇಶ್ ಭಾರದ್ವಾಜ್ ಅವರ ದೂರಿನ ನಂತರ ಸಂಗ್ರೂರ್ ಜಿಲ್ಲಾ ನ್ಯಾಯಾಲಯವು ಕಾಂಗ್ರೆಸ್ ಅಧ್ಯಕ್ಷರಿಗೆ ಸಮನ್ಸ್ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ