ನವದೆಹಲಿ:
ವಿಶ್ವ ಸಂಸ್ಥೆಯ ನ್ಯಾಟೋ ಸದಸ್ಯತ್ವ ಪಡೆಯಲು ಉಕ್ರೇನ್ ಇನ್ನು ಸಿದ್ದವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಯುರೋಪ್ ಪ್ರವಾಸಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜೋ ಬೈಡನ್ ಇದನ್ನು ಸ್ಪಷ್ಟಪಡಿಸಿದ್ದಾರೆ. ‘ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದ ನಂತರವೇ ನ್ಯಾಟೋ ಸದಸ್ಯತ್ವಕ್ಕೆ ಉಕ್ರೇನ್ ಅನ್ನು ಪರಿಗಣಿಸಲು ಸಾಧ್ಯ’ ಎಂದರು.
‘ಯುದ್ಧದ ನಡುವೆ ಉಕ್ರೇನ್ ಅನ್ನು ನ್ಯಾಟೋ ಕುಟುಂಬಕ್ಕೆ ತರಬೇಕೆ ಅಥವಾ ಬೇಡವೇ ಎಂಬ ಕುರಿತು ನ್ಯಾಟೋ ಸದಸ್ಯ ರಾಷ್ಟ್ರಗಳಲ್ಲಿ ಸರ್ವಾನುಮತವಿದೆ ಎಂದು ನಾನು ಭಾವಿಸುವುದಿಲ್ಲ. ಒಂದು ವೇಳೆ ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಿದರೆ ಅಮೆರಿಕ ಸೇರಿದಂತೆ ನ್ಯಾಟೋ ಸದಸ್ಯ ರಾಷ್ಟ್ರಗಳೆಲ್ಲ ಯದ್ಧದ ಭಾಗವಾಗುತ್ತವೆ. ಆಗ ಪ್ರತಿಯೊಂದು ಪ್ರದೇಶಕ್ಕಾಗಿ ನಾವೂ ರಷ್ಯಾದೊಂದಿಗೆ ಕಾದಾಡಬೇಕಾಗುತ್ತದೆ’ ಎಂದು ಹೇಳಿದರು.
‘ನ್ಯಾಟೋಗೆ ಅರ್ಹತೆ ಪಡೆಯಲು ಉಕ್ರೇನ್‌ಗೆ ತರ್ಕಬದ್ಧ ಮಾರ್ಗವನ್ನು ನಾವು ರೂಪಿಸಬೇಕು. ನ್ಯಾಟೋಗೆ ಸೇರಲು ಉಕ್ರೇನ್ ಅನ್ನು ಬಿಡುವುದಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಅದನ್ನು ಹೇಳುವ ಅಧಿಕಾರ ಅವರಿಗಿಲ್ಲ. ನ್ಯಾಟೋ ಒಂದು ತೆರೆದ ಬಾಗಿಲು, ಯಾರೂ ಬೇಕಾದರೂ ಪ್ರವೇಶಿಸಬಹುದು’ ಎಂದರು
‘ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸಕಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಯುದ್ಧಕ್ಕೆ ಬೇಕಾದ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದ್ದೇನೆ’ ಎಂದರು.