ತುಮಕೂರು:
ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ತಂದೆ ಹಾಗು ಮಗಳು ಸಾವನ್ನಪ್ಪಿರುವ ಭೀಕರ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಇಂದು ನಡೆದಿದ್ದು, ಮೃತರನ್ನು ಬಸವನಹಳ್ಳಿಯ ರಾಮಕೃಷ್ಣ ರೆಡ್ಡಿ (65) ಹಾಗೂ ಮಗಳು ನಿರ್ಮಲ (45) ಎಂದು ಗುರುತಿಸಲಾಗಿದೆ.
ರಾಮಕೃಷ್ಣ ರೆಡ್ಡಿ ಅವರು ಮಡಕಶಿರಾ ತಾಲೂಕಿನ ಎಲ್ಲೊಟಿಯಲ್ಲಿರುವ ತಮ್ಮ ಹೊಲದಲ್ಲಿ ನೀರು ಹಾಯಿಸಲು ತೆರಳಿದ್ದರು. ಕೊಳವೆ ಬಾವಿಯ ಬಳಿ ವಿದ್ಯುತ್ ಶಾಕ್ ತಗುಲಿ ಅವರು ಮೃತಪಟ್ಟಿದ್ದಾರೆ. ತಂದೆ ಬರುವುದು ತಡವಾದ್ದರಿಂದ ಹೊಲಕ್ಕೆ ಹುಡುಕಿಕೊಂಡು ಬಂದ ಮಗಳೂ ಕೂಡ ತಂದೆಯನ್ನು ಮುಟ್ಟಿದ್ದಾರೆ. ಇದರಿಂದ ಅವರೂ ಕೂಡ ಸ್ಥಳದಲ್ಲೇ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಡೇಕೋಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗಿದೆ. ದಿಢೀರ್ ಅನಿಲ ಸೋರಿಕೆಯಿಂದ ವಾಹನ ಸವಾರರು ಮತ್ತು ರಸ್ತೆ ಅಕ್ಕಪಕ್ಕದ ಮನೆಯ ಜನರು ಆತಂಕಗೊಂಡಿದ್ದಾರೆ.
ಗೋವಾದಿಂದ ಮಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಲಾರಿಯಲ್ಲಿ ಅನಿಲ ಸೋರಿಗೆಯಾಗಿದ್ದು ಗ್ಯಾಸ್ ಲಿಕೇಜ್ ಎಂದು ತಿಳಿದು ಜನ ಗಾಬರಿಯಾಗಿದ್ದಾರೆ. ಆದರೆ ಇದು ಲಿಕ್ವಿಡ್ ನೈಟ್ರೋಜನ್ ಎಂದು ತಿಳಿದಾಗ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








