ನವದೆಹಲಿ
ಚೀನಾದ ವಂಚಕರು ಸುಮಾರು 15,000 ಭಾರತೀಯರಿಗೆ 712 ಕೋಟಿ ರೂಪಾಯಿ ಹೂಡಿಕೆ ವಂಚನೆಯನ್ನು ಮಾಡಿದ್ದಾರೆ. ಅದಕ್ಕೆ ನಮ್ಮ ಭಾರತೀಯರೇ ಸಾಥ್ ನೀಡಿದ್ದಾರೆ. ಈ ಸಂಬಂಧ ಹೈದರಾಬಾದ್ ಪೊಲೀಸರು ದೇಶಾದ್ಯಂತ ಒಂಬತ್ತು ಜನರನ್ನು ಬಂಧಿಸಿದ್ದಾರೆ. ನಕಲಿ ಹೂಡಿಕೆ ಅಪ್ಲಿಕೇಶನ್‌ಗಳು ಮತ್ತು ಯೋಜನೆಗಳ ಮೂಲಕ ಜನರನ್ನು ವಂಚನೆ ಮಾಡಿದ್ದಾರೆ.
ಅದಾದ ಬಳಿಕ ದುಬೈ ಮೂಲಕ ಚೀನಾಕ್ಕೆ ಹಣವನ್ನು ಲಪಟಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಕ್ರಿಪ್ಟೋವಾಲೆಟ್ ವಹಿವಾಟುಗಳ ಮೂಲಕವೂ ವಂಚನೆ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಈ ಒಂಬತ್ತು ಜನರ ಪೈಕಿ ಈ ವಂಚನೆ ಪ್ರಕರಣದಲ್ಲಿ ಒಬ್ಬ ಮಾಸ್ಟರ್ ಮೈಂಡ್ ಆಗಿದ್ದಾನೆ. ಹೈದಾರಾಬಾದ್‌ನ ವ್ಯಕ್ತಿಯೊಬ್ಬ ಪೊಲೀಸರಿಗೆ ಈ ವಂಚನೆ ಬಗ್ಗೆ ದೂರು ನೀಡಿದ ಬಳಿಕ ಈ ವಂಚನೆ ಪ್ರಕರಣವು ಬಯಲಿಗೆ ಬಂದಿದೆ. 15,000 ಜನರನ್ನು ವಂಚಿಸುವ ಚೀನೀಯರಿಗೆ ಭಾರತೀಯ ಸಾಥ್ ನೀಡಿದ್ದು ಹೇಗೆ.
700 ಕೋಟಿ ವಂಚನೆ ಪ್ರಕರಣ ಹೈದರಾಬಾದ್ ಪೊಲೀಸರು ಇತ್ತೀಚೆಗೆ ಅಹಮದಾಬಾದ್ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈ ಮೂಲಕ 700 ಕೋಟಿ ರೂಪಾಯಿಗಳ ಚೀನಾದ ಆನ್‌ಲೈನ್ ಹೂಡಿಕೆ ವಂಚನೆಯನ್ನು ಬಹಿರಂಗಪಡಿಸಿದ್ದಾರೆ. ಮಾಸ್ಟರ್ ಮೈಂಡ್, ಪ್ರಕಾಶ್ ಮುಲ್ಚಂದಭಾಯ್ ಪ್ರಜಾಪತಿ, 2021 ರಿಂದ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರ ವಾಟೆಂಡ್ ಲೀಸ್ಟ್‌ನಲ್ಲಿದ್ದ. ಈತ ಚೀನಾದವರೊಂದಿಗೆ ಸಂಪರ್ಕದಲ್ಲಿದ್ದು ಭಾರತೀಯರಿಗೆ ಪಂಗನಾಮ ಹಾಕಿದ್ದಾನೆ.
600 ಎಫ್‌ಐಆರ್‌ಗಳು ದಾಖಲು 2023ರಲ್ಲೇ ಈ ವಂಚನೆ ಪ್ರಕರಣದ ವಿರುದ್ಧವಾಗಿ ಸುಮಾರು 600 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೈದರಾಬಾದ್ (ಸೈಬರ್ ಕ್ರೈಂ) ಎಸಿಪಿ ಕೆಬಿಎಂ ಪ್ರಸಾದ್ ಹೇಳಿದ್ದಾರೆ. ಕನಿಷ್ಠ 15,000 ಭಾರತೀಯರನ್ನು ಸ್ಕ್ಯಾಮರ್‌ಗಳು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ಸಹಾಯ ಮಾಡಿದ್ದು ಹೇಗೆ? ಮಾಸ್ಟರ್ ಮೈಂಡ್, ಪ್ರಕಾಶ್ ಮುಲ್ಚಂದಭಾಯ್ ಪ್ರಜಾಪತಿ ಮೂವರು ಹೈದರಾಬಾದ್ ನಿವಾಸಿಗಳ ಆಧಾರ್ ಕಾರ್ಡ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದು, ಲಕ್ನೋ ವಿಳಾಸವನ್ನು ಸೇರಿಸಿಕೊಂಡಿದ್ದಾನೆ.
ಈ ಮಾಹಿತಿಯನ್ನು ಬಳಸಿಕೊಂಡು ಸುಮಾರು 45 ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ. “ಆರಂಭಿಕ ಹಂತದಲ್ಲಿ, ಪ್ರಜಾಪತಿ ಭಾರತದಲ್ಲಿ ಸಕ್ರಿಯವಾಗಿರುವ ಸ್ಥಳೀಯ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರು. ಇದು ವಿದೇಶದಿಂದ ವಿಶೇಷವಾಗಿ ದುಬೈನಿಂದ ರೋಮಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದಾದ ಬಳಿಕ ಮೊಬೈಲ್ ಫೋನ್ ಶೇರಿಂಗ್ ಅಪ್ಲಿಕೇಷನ್ ಅನ್ನು ಬದಲಾವಣೆ ಮಾಡಿದರು. ಹಣ ವರ್ಗಾವಣೆ ಮಾಡುವಾಗ ಒಟಿಪಿಗಳನ್ನು ಸುಲಭವಾಗಿ ಈ ಆಪ್‌ಗಳ ಮೂಲಕ ಕದಿಯುತ್ತಿದ್ದರು,” ಎಂದು ಹೈದರಾಬಾದ್ (ಸೈಬರ್ ಕ್ರೈಂ) ಎಸಿಪಿ ಕೆಬಿಎಂ ಪ್ರಸಾದ್ ಹೇಳಿದ್ದಾರೆ.
ತನ್ನ ಚೀನಾದ ಹ್ಯಾಂಡ್ಲರ್‌ಗಳಿಂದ ಪ್ರಜಾಪತಿ ಈ ಮೋಸವನ್ನು ಮಾಡುತ್ತಿದ್ದು, ಶೇಕಡ 3ರಷ್ಟು ಕಮಿಷನ್ ಮೂಲಕ 10 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿವರೆಗೆ ದೈನಂದಿನವಾಗಿ ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅಕ್ರಮವಾಗಿ ಗಳಿಸಿದ ಹಣದ ಒಂದು ಭಾಗವನ್ನು ಲೆಬನಾನ್ ಮೂಲದ ಭಯೋತ್ಪಾದಕ ಗುಂಪು ಹೆಜ್ಬೊಲ್ಲಾ ನಿರ್ವಹಿಸುತ್ತಿರುವ ಖಾತೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎನ್‌ಸಿಆರ್‌ಬಿ ಡೇಟಾ 2021 ರಲ್ಲಿ 14,007 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಸಂಸತ್ತಿಗೆ ಸೋಮವಾರ ತಿಳಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಡೇಟಾವನ್ನು ಉಲ್ಲೇಖಿಸಿ, ಸಚಿವ ಭಾಗವತ್ ಕರದ್ , “2021 ರಲ್ಲಿ ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಮಾಡಿದ ವಂಚನೆಗಳನ್ನು ಒಳಗೊಂಡಿರುವ ಒಟ್ಟು ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ 14,007 ಆಗಿದೆ,” ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ