ಚುನಾವಣಾ ಕರ್ತವ್ಯ : ಶಿಕ್ಷಕರ ನಿಯೋಜನೆ ಬೇಡ ಎಂದ ಇಲಾಖೆ: ಕಾರಣವಾದ್ರು ಏನು …?

ಬೆಂಗಳೂರು:

     ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಇತರ ಕೆಲಸಗಳಿಗೆ ತಮ್ಮ ಶಿಕ್ಷಕರನ್ನು ನಿಯೋಜಿಸದಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಬಿಬಿಎಂಪಿಗೆ ಒತ್ತಾಯಿಸಿದ್ದಾರೆ.

    ಬಿಬಿಎಂಪಿ ವಿಶೇಷ ಆಯುಕ್ತರಿಗೆ (ಚುನಾವಣೆ) ಪತ್ರ ಬರೆದಿದುವರ ಆಯುಕ್ತರು, ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ, ಶಿಕ್ಷಕರ ನಿಯೋಜನೆಯನ್ನು ಅಂತಹ ಕೆಲಸಕ್ಕೆ ನಿರ್ಬಂಧಿಸಲಾಗಿದೆ ಎಂದಿದ್ದಾರೆ.

    ‘ಸಾರ್ವಜನಿಕ ರಜಾದಿನಗಳು, ದಸರಾ ಮತ್ತು ಬೇಸಿಗೆ ರಜೆಯನ್ನು ಪರಿಗಣಿಸಿ ನಾವು 244 ಕೆಲಸದ ದಿನಗಳನ್ನು ನಿಗದಿಪಡಿಸಿದ್ದೇವೆ. ಪಠ್ಯೇತರ ಚಟುವಟಿಕೆಗಳು, ಪರೀಕ್ಷೆಗಳು ಮತ್ತು ಮೌಲ್ಯಮಾಪನ ಕಾರ್ಯಗಳನ್ನು ನಡೆಸಲು 64 ದಿನಗಳನ್ನು ಮೀಸಲಿಡಲಾಗಿದೆ. ಆದರೆ, ಅವರನ್ನು ಚುನಾವಣಾ ಸಂಬಂಧಿತ ಕೆಲಸಕ್ಕೆ ನಿಯೋಜಿಸುವುದರಿಂದ ವೇಳಾಪಟ್ಟಿಗೆ ತೊಂದರೆ ಮತ್ತು ಪರಿಣಾಮ ಬೀರುತ್ತದೆ’ ಎಂದಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ