ಏಷ್ಯನ್​ ಗೇಮ್ಸ್​ : ತಂಡ ಪ್ರಕಟ…!

ವದೆಹಲಿ:

      ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ದಾಖಲೆಯ 634 ಕ್ರೀಡಾಪಟುಗಳ ತಂಡ ಭಾಗವಹಿಸಲಿದೆ. ಈ ಜಂಬೋ ತಂಡದ ಸ್ಪರ್ಧೆಗೆ ಕ್ರೀಡಾ ಸಚಿವಾಲಯ ಶುಕ್ರವಾರ ಹಸಿರು ನಿಶಾನೆ ತೋರಿದೆ. ಕಳೆದ 2018ರ ಜಕಾರ್ತ ಏಷ್ಯಾಡ್​ನಲ್ಲಿ 572 ಕ್ರೀಡಾಪಟುಗಳು ಭಾಗವಹಿಸಿದ್ದು ಭಾರತದ ಹಿಂದಿನ ದಾಖಲೆ ಎನಿಸಿತ್ತು.

     ಭಾರತೀಯ ಒಲಿಂಪಿಕ್ಸ್​ ಸಂಸ್ಥೆ (ಐಒಎ) ಏಷ್ಯಾಡ್​ಗೆ ಒಟ್ಟು 850 ಕ್ರೀಡಾಪಟುಗಳ ಹೆಸರು ಶಿಾರಸು ಮಾಡಿತ್ತು. ಈ ಪೈಕಿ 278 ಕ್ರೀಡಾಪಟುಗಳನ್ನು ಕೈಬಿಡಲಾಗಿದೆ. ಏಷ್ಯಾಡ್​ ಚೀನಾದ ಹಾಂಗ್​ರೆೌನಲ್ಲಿ ಸೆಪ್ಟೆಂಬರ್​ 23ರಿಂದ ನಡೆಯಲಿದೆ.

    ಭಾರತದ ಕ್ರೀಡಾಪಟುಗಳು ಒಟ್ಟು 38 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದು, ಈ ಪೈಕಿ ಅಥ್ಲೆಟಿಕ್ಸ್​ನಲ್ಲಿ ಗರಿಷ್ಠ 65 ಕ್ರೀಡಾಪಟುಗಳು (34 ಪುರುಷ, 31 ಮಹಿಳೆಯರು) ಭಾಗವಹಿಸಲಿದ್ದಾರೆ. ಪುರುಷ&ಮಹಿಳಾ ುಟ್​ಬಾಲ್​ ತಂಡದಿಂದ ಒಟ್ಟು 44 ಆಟಗಾರರು ಭಾಗವಹಿಸಲಿದ್ದಾರೆ.

    ಹಾಕಿಯಲ್ಲಿ ಪುರುಷ&ಮಹಿಳಾ ವಿಭಾಗದಿಂದ ಒಟ್ಟು 36 ಆಟಗಾರರು ತೆರಳಲಿದ್ದಾರೆ. ಪುರುಷ&ಮಹಿಳಾ ಕ್ರಿಕೆಟ್​ನಲ್ಲಿ ಒಟ್ಟು 30 ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಶೂಟಿಂಗ್​ ತಂಡದಲ್ಲೂ 30 ಕ್ರೀಡಾಪಟುಗಳಿದ್ದಾರೆ. ಪುರುಷರ ವೇಟ್​ಲಿಫ್ಟಿಂಗ್​, ಜಿಮ್ನಾಸ್ಟಿಕ್ಸ್​, ಹ್ಯಾಂಡ್​ಬಾಲ್​ ಮತ್ತು ರಗ್ಬಿಯಲ್ಲಿ ಯಾರಿಗೂ ಸ್ಪರ್ಧೆ ಅವಕಾಶ ಕಲ್ಪಿಸಿಲ್ಲ. ವೇಟ್​ಲಿಫ್ಟಿಂಗ್​ನಲ್ಲಿ ಮಹಿಳೆಯರು ಮಾತ್ರ ಸ್ಪರ್ಧಿಸಲಿದ್ದಾರೆ.

    ಆಯ್ಕೆ ಟ್ರಯಲ್ಸ್​ ವಿನಾಯಿತಿಯೊಂದಿಗೆ ಏಷ್ಯಾಡ್​ಗೆ ಆಯ್ಕೆಯಾಗಿದ್ದ ಕುಸ್ತಿಪಟು ಭಜರಂಗ್​ ಪೂನಿಯಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ ಅವರು ಕೂಟದಿಂದ ಹಿಂದೆ ಸರಿಯುವ ಸಾಧ್ಯತೆ ಇನ್ನೂ ಇದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link