ನವದೆಹಲಿ:
ಇಸ್ರೊಗೆ ಕೇಂದ್ರ ಸರ್ಕಾರದ ‘ಬಾಹ್ಯಾಕಾಶ ಇಲಾಖೆ’ಯ ಅಧೀನ ಸಂಸ್ಥೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಪಾತ್ರವಹಿಸುವ ಈ ಇಲಾಖೆಗೆ ಕೇಂದ್ರ ಸರ್ಕಾರವು ಪ್ರತಿವರ್ಷ ನೀಡುತ್ತಿರುವ ಅನುದಾನವನ್ನು ಕಡಿತ ಮಾಡುತ್ತಲೇ ಇದೆ.
2022-23ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಈ ಇಲಾಖೆಗೆ ₹13,700 ಕೋಟಿ ಅನುದಾನವನ್ನು ಘೋಷಿಸಿತ್ತು. 2023-24ನೇ ಸಾಲಿನ ಬಜೆಟ್ನಲ್ಲೇ ಅನುದಾನವನ್ನು ₹12,543 ಕೋಟಿಗೆ ಕಡಿತ ಮಾಡಲಾಗಿದೆ. ಇದರಿಂದ ಇಲಾಖೆಗೆ ಘೋಷಣೆಯಾದ ಅನುದಾನದಲ್ಲಿ ಶೇ 8.5ರಷ್ಟು ಕಡಿಮೆಯಾದಂತಾಗಿದೆ.
ಇನ್ನೊಂದೆಡೆ ಬಜೆಟ್ನಲ್ಲಿ ಘೋಷಿಸಿದಷ್ಟೂ ಅನುದಾನವನ್ನು ಕೇಂದ್ರ ಸರ್ಕಾರ ಇಲಾಖೆಗೆ ನೀಡುತ್ತಿಲ್ಲ. ಬದಲಿಗೆ ಅಂತಿಮವಾಗಿ ನೀಡುತ್ತಿರುವ ಅನುದಾನದಲ್ಲಿ ಮತ್ತಷ್ಟು ಕಡಿತ ಮಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ