ಸುಪ್ರೀಂ ಕೊರ್ಟ್ ನಿಂದ ಹೊರಬಿತ್ತು ಸಂಚಲನಾತ್ಮಕ ತೀರ್ಪು ……!

ನವದೆಹಲಿ:

    ‘ಅಮಾನ್ಯ ಮದುವೆ’ಗಳಿಂದ ಜನಿಸಿದ ಮಕ್ಕಳಿಗೂ ತಮ್ಮ ಪೋಷಕರ ಆಸ್ತಿಯಲ್ಲಿ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಂತಹ ಮಕ್ಕಳು ಶಾಸನಬದ್ಧವಾಗಿ ಕಾನೂನು ಸಮ್ಮತಿ ಪಡೆದಿರುತ್ತಾರೆ ಎಂದು ನ್ಯಾಯಾಲಯ ವಿವರಿಸಿದೆ.

     ಆದರೆ ಅವರು ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿ ಮಾತ್ರವೇ ಈ ಹಕ್ಕು ಪ್ರತಿಪಾದಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ‘ಅಸಿಂಧು ಮದುವೆಗಳಿಂದ’ ಅಥವಾ ವಿವಾಹೇತರ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಹಿಂದೂ ಅವಿಭಜಿತ ಕುಟುಂಬಗಳ ಪೋಷಕರ ಪೂರ್ವಜರ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ ಎಂದು ಈ ಹಿಂದೆ ಸುಪ್ರೀಂಕೋರ್ಟ್ ಹೇಳಿತ್ತು. ಆ ತೀರ್ಪನ್ನು ಈಗ ಬದಲಿಸಲಾಗಿದೆ.

    ಹಿಂದೂ ಕಾನೂನುಗಳ ಅಡಿಯಲ್ಲಿ ವಿವಾಹೇತರ ಸಂಬಂಧದಿಂದ (ಅನೂರ್ಜಿತ ವಿವಾಹ) ಜನಿಸಿದ ಮಕ್ಕಳು ತಮ್ಮ ಹೆತ್ತವರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಹಿಂದೂ ಕಾನೂನಿನಿಂದ ನಿಯಂತ್ರಿಸಲ್ಪಡುವ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಕೋರ್ಟ್‌ ತೀರ್ಪು ಸ್ಪಷ್ಟಪಡಿಸಿದೆ.

    ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ತೀರ್ಪು ಪ್ರಕರಣವೊಂದರ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ. 2011ರಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್‌, ಕಾನೂನು ಸಮ್ಮತ ವಿವಾಹ ಸಂಬಂಧದಲ್ಲಿ ಜನಿಸಿದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕಿದೆಯೇ ಅಥವಾ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 16(3)ರಲ್ಲಿ ತಮ್ಮ ಪೋಷಕರ ಸ್ವಯಾರ್ಜಿತ ಆಸ್ತಿ ಮೇಲಷ್ಟೇ ಹಕ್ಕಿದೆಯೇ ಎಂಬ ಕುರಿತು ವಿಚಾರಣೆ ನಡೆಸಿತ್ತು.

   ಅಂತಹ ಸಂಬಂಧದಲ್ಲಿ ಮಗುವಿನ ಜನನವು ಪೋಷಕರ ಸಂಬಂಧದಿಂದ ಸ್ವತಂತ್ರವಾಗಿ ನೋಡಬೇಕು. ಅಂತಹ ಸಂಬಂಧದಲ್ಲಿ ಜನಿಸಿದ ಮಗುವು ಇತರ ಮಕ್ಕಳಿಗೆ ನೀಡಲಾಗುವ ಎಲ್ಲಾ ಹಕ್ಕುಗಳಿಗೂ ಅರ್ಹವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

   ಹಿಂದೂ ಕಾನೂನಿನ ಪ್ರಕಾರ, ಅನೂರ್ಜಿತ ವಿವಾಹ ಸಂಬಂಧದಲ್ಲಿ ಮಹಿಳೆ ಮತ್ತು ಪುರುಷ ಗಂಡ ಮತ್ತು ಹೆಂಡತಿಯ ಸ್ಥಾನಮಾನವನ್ನು ಹೊಂದಿರುವುದಿಲ್ಲ. ಶಾಸನದ ಪ್ರಕಾರ, ಅನೂರ್ಜಿತ ವಿವಾಹದಲ್ಲಿ ಗಂಡ ಮತ್ತು ಹೆಂಡತಿಗೆ ಸ್ಥಾನಮಾನವಿದೆ. ಅನೂರ್ಜಿತ ವಿವಾಹದಲ್ಲಿ, ಮದುವೆಯನ್ನು ರದ್ದುಗೊಳಿಸಲು ಯಾವುದೇ ಅನೂರ್ಜಿತ ಆದೇಶದ ಅಗತ್ಯವಿಲ್ಲ. ಆದರೆ, ಅನೂರ್ಜಿತ ವಿವಾಹದಲ್ಲಿ ಅನೂರ್ಜಿತತೆಯ ಆದೇಶದ ಅಗತ್ಯವಿದೆ.

   ‘ಅಮಾನ್ಯ ಮದುವೆ’ಯಿಂದ ಜನಿಸಿದ ಮಕ್ಕಳಿಗೆ ಹಿಂದೂ ಕಾನೂನುಗಳ ಅಡಿಯಲ್ಲಿ ಪೋಷಕರ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಇದೆಯೇ ಎಂಬ 2011ರ ಅರ್ಜಿ ಕುರಿತಾದ ತೀರ್ಪನ್ನು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಕಾಯ್ದಿರಿಸಿತ್ತು.

    ಅಲ್ಲದೆ, ಹಿಂದೂ ವಿವಾಹ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೋಷಕರ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರವೇ ಅಂತಹ ಪಾಲು ಪಡೆಯಲು ಸೀಮಿತ ಅವಕಾಶವಿದೆಯೇ ಎಂಬ ಕುರಿತೂ ಕೋರ್ಟ್ ನಿರ್ಧರಿಸಬೇಕಿತ್ತು. ಈ ಪ್ರಶ್ನೆಗಳನ್ನು 2011ರ ಮಾರ್ಚ್‌ನಲ್ಲಿ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠವು ಸಿಜೆಐ ಪೀಠಕ್ಕೆ ವರ್ಗಾಯಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link