ಬೆಂಗಳೂರು:
ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯ್ ಸ್ಟಾಲಿನ್ ನೀಡಿರುವ ಹೇಳಿಕೆಗೆ ಬೆಂಬಲಿಸುವ ನಿಟ್ಟಿನಲ್ಲಿ ನಿನ್ನೆಯಷ್ಟೇ ಸನಾತನಿಗಳನ್ನು ‘ತನಾತನಿಗಳು’ ಎಂದು ಗೇಲಿ ಮಾಡಿದ್ದ ನಟ ಪ್ರಕಾಶ್ ರಾಜ್ ಇಂದು ಮತ್ತೊಂದು ವಿವಾದಿತ ಟ್ವೀಟ್ ಮಾಡಿದ್ದಾರೆ.
ಸಾಧು ಸಂತರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರ ಕೇಂದ್ರ ಸಚಿವರು ಇರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಪ್ರೀತಿಯ ಪ್ರಜೆಗಳೆ, ಇದು ಭವಿಷ್ಯದ ಸಾಧ್ಯತೆ. ತನಾತನಿ ಸಂಸತ್ತು. ನಿಮಗಿದು ಒಪ್ಪಿಗೆಯೇ ಎಂದು ಕೇಳಿದ್ದಾರೆ.
Back to the Future ..a #Tanathani parliament.. dear CITIZENS are you okay with this… #justasking pic.twitter.com/N57FU1Q5gi
— Prakash Raj (@prakashraaj) September 4, 2023
ಇದಕ್ಕೂ ಮುನ್ನಾ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣುಕನ್ನು ಹಂಚಿಕೊಳ್ಳುವ ಮೂಲಕ ನೀವು ಒಪ್ಪುತ್ತೀರಾ ಎಂದು ಪ್ರಶ್ನಿಸಿದ್ದರು.ನಿನ್ನೆ ಅಂಬೇಡ್ಕರ್ ಮತ್ತು ಪೆರಿಯಾರ್ ಫೋಟೋಗಳನ್ನು ಶೇರ್ ಮಾಡುವುದರ ಜೊತೆಗೆ ಹಿಂದೂಗಳು ತನಾತನಿಸ್ ಅಲ್ಲ, ತನಾತನಿಸ್ ಮಾನವ ವಿರೋಧಿಗಳು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. ಈ ಹಿಂದೆ ಚಂದ್ರಯಾನ-3 ಲೇವಡಿ ಮಾಡುವ ಮೂಲಕ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.